ಗೆಲುವೊಂದೇ ಗುರಿಯಾಗಲಿ

Webdunia
ಭಾನುವಾರ, 18 ಜೂನ್ 2017 (06:11 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲಿಯೇ ಪಂದ್ಯ ನಡೆಯಲಿ. ಅಭಿಮಾನಿಗಳು ಅದೇನೋ ಆಗಿ ಹೋಗುತ್ತದೆಂಬ ಆತಂಕದಿಂದ ಪೂಜೆ ಸಲ್ಲಿಸುತ್ತಾರೆ. ಅಭಿಮಾನಿಗಳ ಈ ಅತಿರೇಕದ ವರ್ತನೆಯಿಂದಲೇ ಈ ಪಂದ್ಯಕ್ಕೆ ಇಷ್ಟೊಂದು ಕಳೆ ಬರುತ್ತದೆ.

 
ನಿನ್ನೆಯಿಂದಲೇ ರಾಜ್ಯದ ವಿವಿದೆಡೆ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡ, ಮೈಸೂರಿನಲ್ಲಿ ವಿವಿಧ ಸಂಘಟನೆಯ ಕಾರ್ಯಕರ್ತರು ಬ್ಯಾಟ್, ಬಾಲ್, ಭಾರತದ ರಾಷ್ಟ್ರ ಧ್ವಜವನ್ನು ದೇವರ ಮುಂದಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಟೀಂ ಇಂಡಿಯಾ ಗೆದ್ದು ಬಾ. ಪಾಕಿಸ್ತಾನವನ್ನು ಪುಡಿಗಟ್ಟು ಎಂಬ ಘೋಷಣೆ ಕೂಗುತ್ತಿದ್ದಾರೆ. ಉಭಯ ದೇಶಗಳ ನಡುವೆ ಯುದ್ಧವೇ ನಡೆಯುತ್ತಿದೆಯೋನೋ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಸೋತ ದೇಶದಲ್ಲಿ ಅಭಿಮಾನಿಗಳು ರೊಚ್ಚಿಗೇಳುವುದು, ಗೆದ್ದ ದೇಶದಲ್ಲಿ ಅಭಿಮಾನಿಗಳ ಮಿತಿ ಮೀರಿದ ಸಂಭ್ರಮವೇ ಈ ಪಂದ್ಯಕ್ಕೆ ಮತ್ತಷ್ಟು ಕಳೆ ನೀಡುತ್ತದೆ.

ಗಡಿಯಲ್ಲಿ ಭಾರತೀಯ ಸೈನಿಕರೂ ಒಟ್ಟು ಸೇರಿ ವಿಶೇಷವಾಗಿ ಭಾರತ ತಂಡಕ್ಕೆ ಶುಭಕೋರಿದ್ದಾರೆ. ಅಲ್ಲದೆ, ಬಾಲಿವುಡ್, ಇತರ ಕ್ರೀಡಾ ಕ್ಷೇತ್ರದ ಗಣ್ಯರು ಸೇರಿದಂತೆ ದೇಶದೆಲ್ಲೆಡೆ ಒಂದೇ ಮಾತು ಕೇಳಿ ಬರುತ್ತಿದೆ. ಅದುವೇ ಗೆದ್ದು ಬಾ ಭಾರತ!

2007 ರಲ್ಲಿ ಇದಕ್ಕಿಂತ ಮೊದಲು ಭಾರತ-ಪಾಕಿಸ್ತಾನ ಫೈನಲ್ ಪಂದ್ಯವೊಂದು ನಡೆದಾಗ ಬೆಂಗಳೂರು ಸೇರಿದಂತೆ ದೇಶದ ಹೆಚ್ಚಿನ ಪ್ರಮುಖ ನಗರಗಳಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಇಂದೂ ಅದೇ ರೀತಿ ಮತ್ತೊಮ್ಮೆ ಇತಿಹಾಸ ಪುನರಾವರ್ತನೆಯಾಗುವುದು ನಿಶ್ಚಿತ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Ind vs WI, T20 WC: ಟೀಕೆಗಳಿಗೆ ಅಬ್ಬರದ ಬ್ಯಾಟಿಂಗ್‌ನಿಂದಲೇ ಉತ್ತರಿಸಿದ ಸಂಜು ಸ್ಯಾಮ್ಸನ್‌

ದುಬೈನಲ್ಲಿ ಸಿಲುಕಿದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು: ವಿಮಾನ ನಿಲ್ದಾಣದಿಂದಲೇ ಹೇಳಿದ್ದೇನು

T20 WC: ಭಾರತ-ವೆಸ್ಟ್ ಇಂಡೀಸ್ ಮುಖಾಮುಖಿಯಲ್ಲಿ ಗೆದ್ದವರು ಸೆಮಿಗೆ, ಸೋತವರು ಮನೆಗೆ

Sri Vs Pak: ಪಂದ್ಯ ಗೆದ್ದರೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಪಾಕ್‌, ಇಲ್ಲಿದೆ ಕಾರಣ

T20 World Cup, Sri VS Pak: ನಿರ್ಣಾಯಕ ಪಂದ್ಯಾದಲ್ಲಿ ಮೂರು ಬದಲಾವಣೆ ಮಾಡಿದ ಪಾಕ್‌

ಮುಂದಿನ ಸುದ್ದಿ
Show comments