Select Your Language

Notifications

webdunia
webdunia
webdunia
webdunia

ಏಕೈಕ ಟಿ20ಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಆಸೀಸ್ ವಿರುದ್ಧ ಜಯ

ಏಕೈಕ ಟಿ20ಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಆಸೀಸ್ ವಿರುದ್ಧ ಜಯ
ಲಂಡನ್ , ಮಂಗಳವಾರ, 1 ಸೆಪ್ಟಂಬರ್ 2015 (19:15 IST)
ಲಂಡನ್ : ಇಂಗ್ಲೆಂಡ್‌ನ  ಬೆನ್ ಸ್ಟೋಕ್ಸ್ ಅಂತಿಮ ಓವರಿನಲ್ಲಿ 3 ವಿಕೆಟ್ ಕಬಳಿಸಿದ್ದರಿಂದ ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ 5 ರನ್ ಅಂತರದಲ್ಲಿ ರೋಮಾಂಚಕ ಜಯ ಗಳಿಸಿದೆ.  ಗೆಲುವಿಗೆ 183 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 11 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 12 ರನ್‌ಗೆ ಕುಸಿಯಿತು. ಆದರೆ ನಾಯಕ ಸ್ಟೀವನ್ ಸ್ಮಿತ್(90) ಮತ್ತು ಮ್ಯಾಕ್ಸ್‌ವೆಲ್ (44) ಅವರ ಉತ್ತಮ ಸ್ಕೋರಿನಿಂದ ಚೇತರಿಸಿಕೊಂಡು ಮೂರನೇ ವಿಕೆಟ್‌ಗೆ 112 ರನ್ ಜತೆಯಾಟವಾಡಿದೆ. 
 
ಆಸ್ಟ್ರೇಲಿಯಾಕ್ಕೆ ಅಂತಿಮ ಓವರಿನಲ್ಲಿ 12 ರನ್ ಅಗತ್ಯವಿತ್ತು. ಮ್ಯಾಥೀವ್ ವೇಡ್ ಮತ್ತು ಪ್ಯಾಟ್ ಕಮಿನ್ಸ್ ರನ್ ಔಟ್ ಆದರು ಮತ್ತು ನಾಥನ್ ಕೌಲ್ಟರ್ ನೈಲ್ ಕ್ಯಾಚಿತ್ತು ಔಟಾದರು. ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 177 ರನ್ ಮಾತ್ರ ಮಾಡಿತು. 
 
 ಆರಂಭದಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಆರಂಭದ ಎರಡು ವಿಕೆಟ್ ಕಳೆದುಕೊಂಡು  ಮಾರ್ಗನ್ 74 ಮತ್ತು ಮೊಯಿನ್ ಅಲಿ ಅಜೇಯ 72 ರನ್ ನೆರವಿನಿಂದ ಇಂಗ್ಲೆಂಡ್ 182 ರನ್ ಮೊತ್ತ ದಾಖಲಿಸಿತ್ತು. 
 

Share this Story:

Follow Webdunia kannada