ಮುಂಬೈ: ಭಾರತದ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಲು ಇಂಗ್ಲೆಂಡ್ ತಂಡ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಬುಧವಾರ ನಸುಕಿನ ವೇಳೆ ಇಂಗ್ಲೆಂಡ್ ತಂಡದ ಸದಸ್ಯರು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನವಂಬರ್ 9 ರಿಂದ ರಾಜಕೋಟ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅಲೆಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ತಂಡ ನೇರವಾಗಿ ಮುಂಬೈನ ಬ್ರೆಬೊರ್ನ್ ಕ್ರಿಡಾಂಗಣದಲ್ಲಿ ಅಭ್ಯಾಸ ನಡೆಸಲು ತೆರಳಲಿದೆ.
ನಂತರ ನವಂಬರ್ 5 ರಂದು ರಾಜ್ ಕೋಟ್ ಗೆ ತೆರಳಲಿದೆ. ಬಾಂಗ್ಲಾದೇಶ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಸೋತಿತ್ತು. ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಯಾವುದೇ ಅಭ್ಯಾಸ ಪಂದ್ಯಗಳೂ ಇಲ್ಲದ ಕಾರಣ ಒತ್ತಡದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ