Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಗೆ ಆಘಾತ ನೀಡಿದ ಬಾಂಗ್ಲಾ

ಇಂಗ್ಲೆಂಡ್ ಗೆ ಆಘಾತ ನೀಡಿದ ಬಾಂಗ್ಲಾ
Dhaka , ಶನಿವಾರ, 29 ಅಕ್ಟೋಬರ್ 2016 (11:44 IST)
ಢಾಕಾ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿಇಂಗ್ಲೆಂಡ್ ಬ್ಯಾಟಿಂಗ್ ಸಂಪೂರ್ಣ ಹಳಿ ತಪ್ಪಿದೆ.

ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾದೇಶ ಗಳಿಸಿದ 220 ರನ್ ಗಳ ಮೊತ್ತ ಬೆನ್ನತ್ತಿರುವ ಇಂಗ್ಲೆಂಡ್ ಊಟದ ವಿರಾಮದ ವೇಳೆಗೆ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲು ಶಕ್ತವಾಗಿದೆಯಷ್ಟೆ. ಮೊದಲ ಇನಿಂಗ್ಸ್ ನ ಮೊತ್ತ ಸರಿಗಟ್ಟಲು ಅದಕ್ಕೆ ಇನ್ನೂ 57 ರನ್ ಗಳ ಆವಶ್ಯಕತೆಯಿದೆ.

ಆದರೆ ಪ್ರಮುಖ ಬ್ಯಾಟ್ಸ್ ಮನ್ ಗಳೆಲ್ಲಾ ಪೆವಿಲಿಯನ್ ಸೇರಿಕೊಂಡಿದ್ದು, ಆದಿಲ್  ರಶೀದ್ ಮತ್ತು ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.  ಬಾಂಗ್ಲಾ ಪರ ಮೆಹದಿ ಹಸನ್ 5 ವಿಕೆಟ್ ಕಿತ್ತರು. ಇದಕ್ಕೂ ಮೊದಲು ಬಾಂಗ್ಲಾ ತಮೀಮ್ ಇಕ್ಬಾಲ್ ಅವರ ಶತಕ(104) ದ ನೆರವಿನಿಂದ 220 ಕ್ಕೆ ಆಲೌಟ್ ಆಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಚಿನ್ ತೆಂಡುಲ್ಕರ್ ಗೆ ವಿಶೇಷ ದಿನ!