Webdunia - Bharat's app for daily news and videos

Install App

ನ್ಯೂಜಿಲೆಂಡ್ ವಿರುದ್ಧ ಪ್ರಥಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಅಚ್ಚರಿಯ ಗೆಲುವು

Webdunia
ಮಂಗಳವಾರ, 26 ಮೇ 2015 (12:10 IST)
ಇಂಗ್ಲೆಂಡ್ ನ್ಯೂಜಿಲೆಂಡ್ ತಂಡದ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಪ್ರಥಮ ಟೆಸ್ಟ್‌ನಲ್ಲಿ 124 ರನ್ ಅಚ್ಚರಿಯ ಗೆಲುವನ್ನು ಸೋಮವಾರ ಸಾಧಿಸಿದೆ. ಐದನೇ ಮತ್ತು ಅಂತಿಮ ದಿನ 345 ರನ್ ಅಗತ್ಯವಿದ್ದ ನ್ಯೂಜಿಲೆಂಡ್ ಕೇವಲ 220 ರನ್‌ಗೆ ಆಲೌಟ್ ಆಗಿದ್ದರಿಂದ ಇಂಗ್ಲೆಂಡ್ ಉಭಯ ರಾಷ್ಟ್ರಗಳ ನಡುವೆ ನೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
 
ಪೀಟರ್ ಮೂರ್ಸ್ ಅವರನ್ನು ವಜಾ ಮಾಡಿದ ಬಳಿಕ ಕಾಯಂ ಹೆಡ್ ಕೋಚ್ ಕೊರತೆಯನ್ನು ಎದುರಿಸುತ್ತಿದ್ದ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 1-1 ನಿರಾಶೆಯ ಸರಣಿ ಡ್ರಾ ಬಳಿಕ ಇಂಗ್ಲೆಂಡ್ ತಂಡಕ್ಕೆ ಅಗತ್ಯವಿದ್ದ ನೈತಿಕಸ್ಥೈರ್ಯಕ್ಕೆ ಚೇತರಿಕೆ ಸಿಕ್ಕಿದೆ. 
 
ಮೊದಲಿಗೆ  12 ರನ್‌ಗೆ 3 ವಿಕೆಟ್ ಕಳೆದುಕೊಂಡು ಕುಸಿತ ಅನುಭವಿಸಿದ್ದ ನ್ಯೂಜಿಲೆಂಡ್ ಬೆನ್ ಸ್ಟೋಕ್ಸ್ ಅವರ ಬೌಲಿಂಗ್ ದಾಳಿಗೆ ಸಿಲುಕಿ 61ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ಆದರೆ ವಾಟ್ಲಿಂಗ್ ಅವರ 59 ರನ್ ಮತ್ತು ಆಂಡರ್‌ಸನ್ ಅವರ 75 ರನ್ ಮೂಲಕ 107 ರನ್ ಜೊತೆಯಾಟವು ಇಂಗ್ಲೆಂಡ್ ತಂಡವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿತು. ಆದಾಗ್ಯೂ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾದ ಬಳಿಕ ನ್ಯೂಜಿಲೆಂಡ್ 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತ್ತು.

ಆದರೆ ಉಳಿದ ಆಟಗಾರರು ಸ್ಕೋರ್ ಮಾಡಲು ವಿಫಲರಾಗಿ 220 ರನ್‌ಗಳಿಗೆ ನ್ಯೂಜಿಲೆಂಡ್ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 389 ರನ್ ಮೊತ್ತಕ್ಕೆ ಉತ್ತರವಾಗಿ ನ್ಯೂಜಿಲೆಂಡ್  523 ರನ್ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 478 ರನ್ ಸ್ಕೋರ್ ಮಾಡಿ ನ್ಯೂಜಿಲೆಂಡ್‌ಗೆ ಗೆಲ್ಲುವುದಕ್ಕೆ 334 ರನ್ ಸವಾಲನ್ನು ಒಡ್ಡಿತ್ತು.

ಐಪಿಎಲ್ 8ರಲ್ಲಿ ಸಿಎಸ್‌ಕೆ ಪರ ಸ್ಫೋಟಕ ಬ್ಯಾಟಿಂಗ್ ಆಡಿದ್ದ ಬ್ರೆಂಡನ್ ಮೆಕಲಮ್ ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೂ ರನ್‌ ಗಳಿಸದೇ ಔಟಾಗಿದ್ದು ಕೂಡ ನ್ಯೂಜಿಲೆಂಡ್ ಕುಸಿತಕ್ಕೆ ಕಾರಣವಾಯಿತು. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments