Webdunia - Bharat's app for daily news and videos

Install App

ಕೊಹ್ಲಿಯ ವಿರಾಟ ರೂಪಕ್ಕೆ ಮಕಾಡೆ ಮಲಗಿತು ಇಂಗ್ಲೆಂಡ್

Webdunia
ಶನಿವಾರ, 10 ಡಿಸೆಂಬರ್ 2016 (16:37 IST)
ಮುಂಬೈ: ಸಚಿನ್ ತೆಂಡುಲ್ಕರ್ ಇರಲಿ ವಿರಾಟ್ ಕೊಹ್ಲಿಯಿರಲಿ. ಇಂತಹ ಕ್ಲಾಸ್ ಬ್ಯಾಟ್ಸ್ ಮನ್ ಗಳು ಇಂದು ಎಂತಹ ಆಟ ಆಡುತ್ತಾರೆ ಎನ್ನುವುದನ್ನು ಒಂದೆರಡು ಓವರ್ ನಲ್ಲೇ ಅರ್ಥ ಮಾಡಿಕೊಳ್ಳಬಹುದು. ಅವರ ಹೊಡೆತಗಳು, ಅವರ ಆತ್ಮ ವಿಶ್ವಾಸವೇ ಅವರನ್ನು ದೊಡ್ಡ ಇನಿಂಗ್ಸ್ ಕಟ್ಟುವಂತೆ ಮಾಡುತ್ತದೆ. ಅದಕ್ಕೇ ಅವರನ್ನು ಕ್ಲಾಸ್ ಬ್ಯಾಟ್ಸ್ ಮನ್ ಗಳು ಎನ್ನುತ್ತಾರೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂದು ಹೊಡೆದ ಶತಕ ಕೂಡಾ ಮೊದಲೇ ಅವರಿಂದು ದೊಡ್ಡ ಇನಿಂಗ್ಸ್ ಕಟ್ಟುತ್ತಾರೆಂದು ಸೂಚನೆ ನೀಡಿತ್ತು. ಅವರ ಆಟದಲ್ಲಿ ಕಾನ್ಫಿಡೆನ್ಸ್ ಇತ್ತು. ಜತೆಗೆ ಎದುರಾಳಿಗಳು ಅರ್ಧಶತಕ ಬಾರಿಸಿದ ಮೇಲೆ ಕ್ಯಾಚ್ ಬಿಟ್ಟಿದ್ದೂ ಆಯಿತು.

ಕೊಹ್ಲಿಯಂತಹ ಬ್ಯಾಟ್ಸ್ ಮನ್ ಗೆ ಎರಡೆರಡು ಅವಕಾಶ ಸಿಕ್ಕಿದರೆ ಸುಮ್ಮನಿರುತ್ತಾರೆಯೇ? ನೋಡು ನೋಡುತ್ತಿದ್ದಂತೆ ಕೊಹ್ಲಿ ತಮ್ಮ ಟೆಸ್ಟ್ ಜೀವನದ 15 ನೇ ಶತಕ ದಾಖಲಿಸಿಯೇ ಬಿಟ್ಟರು. ಅವರ ಈ ಅಮೋಘ ಆಟದಿಂದಾಗಿ ಭಾರತ ದಿನದಂತ್ಯಕ್ಕೆ ವಿಕೆಟ್ ಕಳೆದುಕೊಂಡರೂ ರನ್ ಗಳಿಸಿ ರನ್ ಮುನ್ನಡೆ ಗಳಿಸಿತ್ತು. ಅವರ ಈ ಅಮೋಘ ಆಟದಿಂದಾಗಿ ಐಸಿಸಿ ಶ್ರೇಯಾಂಕದಲ್ಲಿ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ದ್ವಿತೀಯ ಸ್ಥಾನಿಯಾದರು. ಏಕದಿನ ಪಂದ್ಯಗಳ ನಂ.1 ಬ್ಯಾಟ್ಸ್ ಮನ್ ಗೆ ಟೆಸ್ಟ್ ಪಂದ್ಯಗಳಲ್ಲೂ ನಂ.1 ಆಗಲು ಇನ್ನೊಂದೇ ಮೆಟ್ಟಿಲು.

ಎಂದಿನಂತೆ ಇಂದು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ನಲ್ಲಿ ಮಿಂಚಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಜಯಂತ್ ಯಾದವ್ 30 ರನ್ ಗಳಿಸಿ ಕೊಹ್ಲಿ ಜತೆಗೆ ಮೊತ್ತ ಉಬ್ಬಿಸಲು ನೆರವಾದರು. ದಿನದಾಟ ನಿಂತಾಗ ಕೊಹ್ಲಿ ಅಜೇಯ 147 ರನ್ ಗಳಿಸಿದ್ದರು. ಟೀಂ ಇಂಡಿಯಾ 7 ವಿಕೆಟ್ ಗೆ 451 ರನ್ ಗಳಿಸಿದ್ದು, 51 ರನ್ ಮುನ್ನಡೆ ಪಡೆದಿದೆ.

ಭಾರತದ 3 ವಿಕೆಟ್ ಗಳೂ ಇನ್ನೂ ಸುರಕ್ಷಿತವಾಗಿದೆ. ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳೂ ಬ್ಯಾಟಿಂಗ್ ಮಾಡಲು ಸಶಕ್ತರು ಎನ್ನುವುದು ಅತಿಥೇಯ ತಂಡದ ಪ್ಲಸ್ ಪಾಯಿಂಟ್. ಇನ್ನೂ ಎರಡು ದಿನ ಪಂದ್ಯ ಬಾಕಿಯಿರುವ ಕಾರಣ ಫಲಿತಾಂಶ ನಿಶ್ಚಿತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments