Select Your Language

Notifications

webdunia
webdunia
webdunia
webdunia

ಸ್ಕಾಟ್ಲೆಂಡ್ ವಿರುದ್ಧ ಗೆಲುವು: ಖಾತೆ ತೆರೆದ ಇಂಗ್ಲೆಂಡ್

ಸ್ಕಾಟ್ಲೆಂಡ್ ವಿರುದ್ಧ ಗೆಲುವು: ಖಾತೆ ತೆರೆದ ಇಂಗ್ಲೆಂಡ್
ಹ್ಯಾಗ್ಲಿ ಓವರ್, ಕ್ರೈಸ್ಟ್ ಚರ್ಚ್ , ಸೋಮವಾರ, 23 ಫೆಬ್ರವರಿ 2015 (12:46 IST)
ಮೊಯಿನ್ ಅಲಿ ಅವರ ಆಲ್ ರೌಂಡ್ ಪ್ರದರ್ಶನ(128 ಮತ್ತು 2/47) ಮತ್ತು ಸ್ಟೀವನ್ ಫಿನ್ ಅವರ 26 ರನ್‌ಗೆ 3 ವಿಕೆಟ್ ಕಬಳಿಕೆ ನೆರವಿನಿಂದ ಇಂಗ್ಲೆಂಡ್ ಸ್ಕಾಟ್‌ಲೆಂಡ್ ತಂಡವನ್ನು 184 ರನ್‌ಗೆ ಆಲೌಟ್ ಮಾಡುವ ಮೂಲಕ ಮೊಟ್ಟಮೊದಲ ಜಯವನ್ನು ದಾಖಲಿಸಿದೆ. ಈ ಗೆಲುವಿನಿಂದ ಇಯಾನ್ ಮಾರ್ಗನ್ ತಂಡ  ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ.

ಇಂಗ್ಲೆಂಡ್ ತಂಡದ ಬೃಹತ್ ಮೊತ್ತವಾದ 303 ರನ್ ಬೆನ್ನಟ್ಟಿದ ಸ್ಕಾಟ್ಲೆಂಡ್ ಪರ ಕೈಲ್ ಕೊಯೆಟ್ಜರ್ ಅಬ್ಬರದ ಬ್ಯಾಟಿಂಗ್ ಆರಂಭಿಸಿ 84 ಎಸೆತಗಳಲ್ಲಿ 71 ರನ್ ಸಿಡಿಸಿದರು. ಅವರ ಸ್ಕೋರಿನಲ್ಲಿ 11 ಬೌಂಡರಿಗಳಿದ್ದವು.  ಮೊಯನ್ ಅಲಿ ಎಸೆತಕ್ಕೆ ಕ್ರಿಸ್ ವೋಕ್ಸ್‌ಗೆ ಕ್ಯಾಚಿತ್ತು ಔಟಾದ ಬಳಿಕ ಉಳಿದ ಆಟಗಾರರು ಯಾರೂ ಉತ್ತಮ ಮೊತ್ತ ಕಲೆಹಾಕದೇ 184 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿದೆ. ಸ್ಟೀವನ್ ಫಿನ್ 3 ವಿಕೆಟ್‌ಗಳನ್ನು ಮತ್ತು ಕ್ರಿಸ್ ವೋಕ್ಸ್ ಮ್ತತು ಮೊಯಿನ್ ಅಲಿ ತಲಾ ಎರಡು ವಿಕೆಟ್ ಕಬಳಿಸಿದರು.

ಇದಕ್ಕೆ ಮುಂಚೆ ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾದ ಮೊಯಿನ್ ಅಲಿ ಇಯಾನ್ ಬೆಲ್ ಉತ್ತಮ ಜೊತೆಯಾಟವಾಡಿದರು. ಮೊಯಿನ್ ಅಲಿ 12 ಬೌಂಡರಿ. 5 ಸಿಕ್ಸರುಗಳೊಂದಿಗೆ 128 ರನ್ ಮತ್ತು ಇಯಾನ್ ಬೆಲ್  54 ರನ್, ಮೋರ್ಗನ್ 46 ರನ್ ಸ್ಕೋರ್ ಮಾಡಿ 303 ರನ್ ಬೃಹತ್ ಮೊತ್ತವನ್ನು ಕಲೆಹಾಕಿದರು. ಸ್ಕಾಟ್ಲೆಂಡ್ ಪರ ಜೋಷ್ ಡೇವಿ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ 4 ವಿಕೆಟ್ ಕಬಳಿಸಿದರು. 

Share this Story:

Follow Webdunia kannada