Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಿ ಕಾಟದಿಂದ ಬೇಗ ಚಹಾ ವಿರಾಮ!

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಿ ಕಾಟದಿಂದ ಬೇಗ ಚಹಾ ವಿರಾಮ!
Vishakha Pattanam , ಗುರುವಾರ, 17 ನವೆಂಬರ್ 2016 (14:25 IST)
ವಿಶಾಖ ಪಟ್ಟಣ: ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ನಡುವೆ ನಾಯಿಯೊಂದು ಕಾಣಿಸಿಕೊಂಡಿತು. ಇದನ್ನು ಓಡಿಸಲಾಗದೆ ಸುಸ್ತು ಹೊಡೆದ ಆಟಗಾರರು ಓವರ್ ಪೂರ್ತಿಗೊಳಿಸದೆ ಬೇಗನೇ ಚಹಾ ವಿರಾಮಕ್ಕೆ ತೆರಳಿದ ಘಟನೆ ನಡೆದಿದೆ.

ಸ್ಟುವರ್ಟ್ ಬ್ರಾಡ್ ಎಸೆದ 57 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಎರಡು ಬಾಲ್ ಎಸೆದ ಮೇಲೆ ಇದ್ದಕ್ಕಿದ್ದಂತೆ ಒಂದು ನಾಯಿ ಮೈದಾನ ಪ್ರವೇಶಿಸಿತು. ಬೌಲರ್ ಸ್ಟುವರ್ಟ್ ಬ್ರಾಡ್ ನಾಯಿಯನ್ನು ಓಡಿಸಲು ಸಕಲ ಪ್ರಯತ್ನ ನಡೆಸಿದರೂ ಅದು ಹೋಗಲಿಲ್ಲ.

ಕೊನೆಗೆ ಮೈದಾನದ ಸಿಬ್ಬಂದಿಗಳು ಬಂದು ಓಡಿಸುವ ಪ್ರಯತ್ನ ನಡೆಸಿದರು. ತಮ್ಮ ಕಾಲಲ್ಲಿದ್ದ ಶೂ ತೆಗೆದು ಓಡಿಸಲು ನೋಡಿದರೂ ಅದು ಸುಲಭಕ್ಕೆ ತೆರಳುವ ಸೂಚನೆ ಇರಲಿಲ್ಲ. ಸುಮ್ಮನೇ ಸಮಯ ಹಾಳು ಮಾಡುವ ಬದಲು ಚಹಾ ವಿರಾಮ ಘೋಷಿಸಿ ಅಂಪಾಯರ್ ಗಳು ಮೈದಾನ ಸಿಬ್ಬಂದಿಗೆ ನಾಯಿ ಓಡಿಸಲು ಅವಕಾಶ ಮಾಡಿಕೊಟ್ಟರು!

ಈ ವೇಳೆ ಭಾರತ 2 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 91 ಮತ್ತು ಚೇತೇಶ್ವರ ಪೂಜಾರ 97 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಿ ಕಾಟದಿಂದ ಬೇಗ ಚಹಾ ವಿರಾಮ!