Webdunia - Bharat's app for daily news and videos

Install App

ವಿಂಡೀಸ್ ವಿರುದ್ಧ ಕೊಹ್ಲಿ ಟೆಸ್ಟ್ ಶತಕವಿಲ್ಲ, ಆದರೀಗ ಪರಿಸ್ಥಿತಿ ಬದಲು

Webdunia
ಗುರುವಾರ, 21 ಜುಲೈ 2016 (19:16 IST)
ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಸಂತೋಷದ ಬೇಟೆಯ ತಾಣವಾಗಿರಲಿಲ್ಲ. ಭಾರತದ ಯುವ ನಾಯಕ 2011ರಲ್ಲಿ ಕ್ಯಾರಿಬಿಯನ್ ಪ್ರವಾಸ ಮಾಡಿದ್ದು, ಕೇವಲ ಐದು ಇನ್ನಿಂಗ್ಸ್‌ಗಳಲ್ಲಿ  15.20 ಸರಾಸರಿಯೊಂದಿಗೆ ಹಿಂತಿರುಗಿದ್ದರು. ಆದರೆ ಈ ಬಾರಿ ಕಥೆ ಸಂಪೂರ್ಣ ಭಿನ್ನವಾಗಿದೆ. 

ಕೊಹ್ಲಿ ಈಗ ಕಿರು ಮಾದರಿಗಳ ಕ್ರಿಕೆಟ್‌ನಲ್ಲಿ ಕೊಲೊಸಸ್ ರೀತಿ ದಾಪುಗಾಲು ಹಾಕಿದ್ದು, ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರತಿಯೊಂದು ಅವಕಾಶಕ್ಕೂ ಸವಾಲು ಹಾಕುವ ಕೊಹ್ಲಿ ಸಾಮರ್ಥ್ಯದಿಂದಾಗಿ  ವೆಸ್ಟ್ ಇಂಡೀಸ್ ಬೌಲರುಗಳ ಮಗ್ಗುಲ ಮುಳ್ಳಾಗಿದ್ದಾರೆ. ಎರಡನೇ ಅಭ್ಯಾಸ ಪಂದ್ಯದಲ್ಲಿ ಅವರ ರನ್ ಹಸಿವು ಸಾಬೀತಾಗಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿದ ಬಳಿಕ, ಕೊಹ್ಲಿ ಎರಡನೇ ಪಂದ್ಯದಲ್ಲಿ 51 ರನ್ ಸಿಡಿಸಿದರು. ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ 96 ಎಸೆತಗಳನ್ನು ಎದುರಿಸಿದರು.
 
41 ಪಂದ್ಯಗಳಲ್ಲಿ 11 ಟೆಸ್ಟ್ ಶತಕಗಳನ್ನು ಗಳಿಸಿದ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ 6 ಟೆಸ್ಟ್‌ಗಳಲ್ಲಿ  ಒಂದು ಶತಕವನ್ನು ಕೂಡ ಸ್ಕೋರ್ ಮಾಡಿಲ್ಲ. ಕೊಹ್ಲಿ ಅವರ 27.88 ಟೆಸ್ಟ್ ಸರಾಸರಿಯು ಇಂಗ್ಲೆಂಡ್(20.12) ಮತ್ತು ಬಾಂಗ್ಲಾದೇಶ(14) ಸರಾಸರಿಗಿಂತ ಉತ್ತಮವಾಗಿದೆ. ಭಾರತ ಕ್ಯಾರಿಬಿಯನ್ ದ್ವೀಪದಲ್ಲಿ ಮೂರನೇ ಸರಣಿ ಜಯಕ್ಕಾಗಿ ಎದುರುನೋಡುತ್ತಿರುವ ನಡುವೆ ವೆಸ್ಟ್ ಇಂಡೀಸ್ ದುರಾದೃಷ್ಟದಿಂದ ಕೊಹ್ಲಿ ಹೊರಬರುವರೇ ಎಂಬ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments