Webdunia - Bharat's app for daily news and videos

Install App

ಬುಕ್ಕಿಗಳು ಪಂದ್ಯಗಳ ಫಿಕ್ಸ್‌ಗಾಗಿ ಗಂಗೂಲಿಯನ್ನು ಸಂಪರ್ಕಿಸಿದ್ದರೇ? ಇಲ್ಲಿದೆ ಸತ್ಯಾಂಶ

Webdunia
ಮಂಗಳವಾರ, 12 ಜುಲೈ 2016 (16:16 IST)
ನವದೆಹಲಿ: ಭಾರತದ ಕ್ರಿಕೆಟ್‌ನಲ್ಲಿ  ಮ್ಯಾಚ್ ಫಿಕ್ಸಿಂಗ್ ಹಗರಣ ಅಪ್ಪಳಿಸಿದ ಸಂದರ್ಭದಲ್ಲಿ ಗಂಗೂಲಿಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಆ ಕಾಲದಲ್ಲಿ ಯಾವುದೇ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಗಳು ಇಲ್ಲದಿರುವುದರಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಗಂಗೂಲಿ ಮುಂತಾದ ಆಟಗಾರರನ್ನು ಅವರ ವೃತ್ತಿಜೀವನದಲ್ಲಿ ಎಂದಾದರೂ ಪಂದ್ಯ ಫಿಕ್ಸ್ ಮಾಡಲು ಬುಕ್ಕಿಗಳು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ನಿರಾಕರಣೆಯ ಉತ್ತರವನ್ನು ನೀಡಿದ್ದರು.

ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲವಾದರೂ, ಅವರನ್ನು ಬುಕ್ಕಿಗಳು ಸಂಪರ್ಕಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗ ಅವರು ಹೇಳಿದ ಧಾಟಿ ನಿಜವೆಂದು ಕಾಣುತ್ತಿದ್ದು,  ಗಂಗೂಲಿ ಅಥವಾ ಅವರ ಬಳಗದಲ್ಲಿರುವ ಯಾರೊಬ್ಬರನ್ನೂ ಸಂಪರ್ಕಿಸುವ ಎದೆಗಾರಿಕೆ ಬುಕ್ಕಿಗಳಿಗೆ ಇರಲಿಲ್ಲವೆಂದು ಮಾಜಿ ಬುಕ್ಕಿಯೊಬ್ಬರು ಹೇಳಿದ್ದಾರೆ.
 
ಗಂಗೂಲಿ ನಾಯಕನಾಗಿದ್ದಾಗ ಅನೇಕ ಬುಕ್ಕಿಗಳು ಅವರು ಪಂದ್ಯ ಫಿಕ್ಸ್ ಮಾಡಬೇಕೆಂದು ಬಯಸಿದ್ದರು. ಅವರು ಮಾತ್ರವಲ್ಲದೇ ಸಚಿನ್, ಕುಂಬ್ಳೆಯನ್ನು ತಮ್ಮ ಕಡೆ ಸೆಳೆದುಕೊಂಡರೆ, ಇಡೀ ತಂಡದ ಮೇಲೆ ಪ್ರಭಾವ ಬೀರಬಹುದೆಂದು ಭಾವಿಸಿದ್ದರು. ಆದರೆ ದಾದಾ ಅತ್ಯಂತ ದೇಶಾಭಿಮಾನಿ ನಾಯಕರಾಗಿದ್ದು ಇದು ಸಂಭವಿಸುವುದು ಕಷ್ಟ ಎಂಬ ಅರಿವಿತ್ತು. ಹೀಗಾಗಿ ಬುಕ್ಕಿಗಳು ಅವರನ್ನು ಸಂಪರ್ಕಿಸಲು ಹೆದರಿದ್ದರು. ಗಂಗೂಲಿಯನ್ನು ಮಾರಾಟದ ವಸ್ತುವಾಗಿಸಲು ಸಾಧ್ಯವಿಲ್ಲ ಮತ್ತು ಅವರನ್ನು ಸಂಧಿಸಲು ಯಾರಿಗೂ ಧೈರ್ಯವಿಲ್ಲ. ಏಕೆಂದರೆ ಬುಕ್ಕಿಗಳ ವ್ಯವಹಾರ ಅವ್ಯವಸ್ಥೆಗೀಡಾಗುವ ಭಯವಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments