Select Your Language

Notifications

webdunia
webdunia
webdunia
webdunia

ಫೆಬ್ರವರಿಯಲ್ಲಿ ಧೋನಿ ತಂದೆಯಾಗುವ ಶುಭ ಸುದ್ದಿ

ಫೆಬ್ರವರಿಯಲ್ಲಿ ಧೋನಿ ತಂದೆಯಾಗುವ ಶುಭ ಸುದ್ದಿ
ನವದೆಹಲಿ , ಶನಿವಾರ, 31 ಜನವರಿ 2015 (18:48 IST)
ವದಂತಿಗಳನ್ನು ನಂಬುವುದಾದರೆ, ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಗರ್ಭಿಣಿಯಾಗಿದ್ದಾರೆ. ಇದು ದಂಪತಿಯ ಪ್ರಥಮ ಮಗುವಾಗಲಿದೆ. ಮಗು ಹುಟ್ಟುವ ಡ್ಯೂ ಡೇಟ್ ಫೆಬ್ರವರಿ ತಿಂಗಳು. ಧೋನಿ ಮತ್ತು ಸಾಕ್ಷಿ 2010ರಲ್ಲಿ ಮದುವೆಯಾಗಿದ್ದರು.

ಪ್ರಸಕ್ತ ಧೋನಿ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್‌ಗೆ ಸಿದ್ಧತೆ ನಡೆಸಿದ್ದಾರೆ. ಆದಾಗ್ಯೂ ತನ್ನ ಪತ್ನಿ ಸಾಕ್ಷಿಯ ಆರೋಗ್ಯದ ಬಗ್ಗೆ ಧೋನಿ ವಿಚಾರಿಸಿಕೊಳ್ಳುತ್ತಿದ್ದಾರೆ.ಧೋನಿಯ ಕ್ಷೋಭೆಯ ಕಾಲದ ನಂತರ ಪ್ರಥಮ ಮಗು ಶುಭ ಸುದ್ದಿಯಾಗಿ ಪರಿಣಮಿಸಲಿದೆ.

ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ಅಚ್ಚರಿಯ ನಿವೃತ್ತಿಯನ್ನು ಇತ್ತೀಚೆಗೆ ಪಡೆದಿದ್ದರು. ವಿಶ್ವ ಕಪ್‌ಗೆ ಮುನ್ನ, ಭಾರತ ಆಡಿದ ತ್ರಿಕೋನ ಸರಣಿಯಲ್ಲಿ ಕೂಡ ಭಾರತ ಒಂದೂ ಪಂದ್ಯ ಗೆಲ್ಲದೇ ನಿರ್ಗಮಿಸಿದೆ. ಇವೆಲ್ಲಾ ಸಂಕಷ್ಟಗಳ ನಂತರ ಸಾಕ್ಷಿ ಮಗುವಿಗೆ ಜನ್ಮನೀಡುವುದು ಧೋನಿಗೆ ಸಂತಸದ ವಿಷಯವಾಗಲಿದೆ.
 

Share this Story:

Follow Webdunia kannada