Select Your Language

Notifications

webdunia
webdunia
webdunia
webdunia

2012ರಲ್ಲಿ ಧೋನಿ ನಾಯಕತ್ವಕ್ಕೆ ಕೊಕ್ ನೀಡುವುದನ್ನು ಶ್ರೀನಿವಾಸನ್ ತಡೆದರು!

2012ರಲ್ಲಿ ಧೋನಿ ನಾಯಕತ್ವಕ್ಕೆ ಕೊಕ್  ನೀಡುವುದನ್ನು ಶ್ರೀನಿವಾಸನ್ ತಡೆದರು!
ನವದೆಹಲಿ , ಶುಕ್ರವಾರ, 12 ಜೂನ್ 2015 (16:18 IST)
ಮಹೇಂದ್ರ ಸಿಂಗ್ ಧೋನಿ ಅತ್ಯಂತ ಯಶಸ್ವಿ ಭಾರತ ತಂಡದ ನಾಯಕರಾಗಿದ್ದರೂ, 2011-12ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವಮಾನಕರ 0-4 ಸೋಲಿನ ಬಳಿಕ ಧೋನಿಗೆ ನಾಯಕತ್ವದಿಂದ ಕೊಕ್ ನೀಡಲು ನಿರ್ಧರಿಸಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಬಳಿಕ ಆಯ್ಕೆದಾರರು ಧೋನಿಗೆ ನಾಯಕತ್ವ ಪಟ್ಟವನ್ನು ತೆಗೆಯಲು ನಿರ್ಧರಿಸಿದ್ದರು. ಹೊಸ ಟೀಂ ಶೀಟ್ ಸಿದ್ದಪಡಿಸಿದ ಆಯ್ಕೆದಾರರು ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ನೀಡಿದ್ದರು.

ಆದರೆ ತಂಡ ಆಟಗಾರರನ್ನು ಪ್ರಕಟಿಸುವುದಕ್ಕೆ ಮುನ್ನ ಅವರು ವಾಡಿಕೆಯಂತೆ ಎನ್. ಶ್ರೀನಿವಾಸನ್ ಅವರಿಗೆ ಈ ಕುರಿತು ಮಾಹಿತಿ ನೀಡಿದರು.  ಆ ಸಂದರ್ಭದಲ್ಲಿ ಶ್ರೀನಿವಾಸನ್ ಗಾಲ್ಫ್ ಆಡುತ್ತಿದ್ದವರಿಗೆ ಬದಲಾವಣೆ ಕುರಿತು ತಿಳಿಸಲಾಯಿತು.  ಶ್ರೀನಿವಾಸನ್ ಧೋನಿ ಅವರನ್ನು ನಾಯಕರನ್ನಾಗಿ ಉಳಿಸುವಂತೆಯೂ ಇಲ್ಲದಿದ್ದರೆ ಟೀಂ ಶೀಟ್‌ಗೆ ತಾವು ಸಹಿಹಾಕುವುದಿಲ್ಲ ಖಡಾಖಂಡಿತವಾಗಿ ಹೇಳಿದರು. 
 
ಭಾರತದ ಮಾಜಿ ಆಯ್ಕೆದಾರ ವೆಂಕಟ್ ಬೆಂಗಾಲಿ ನಿಯತಕಾಲಿಕೆಯಲ್ಲಿ ಈ ಕುರಿತು ತಿಳಿಸಿದ್ದು, ಇದು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಾಗಿದ್ದು, ಭಾರತ ಮೂರು ಪಂದ್ಯಗಳನ್ನು ಸೋತ ಬಳಿಕ ನಾಯಕತ್ವ ಬದಲಾವಣೆ ಅವಶ್ಯಕವೆಂದು ನಾವು ನಿರ್ಧರಿಸಿದ್ದಾಗಿ ಅವರು ತಿಳಿಸಿದರು.

 2012ರಲ್ಲಿ ಕೊಹ್ಲಿಯನ್ನು ಧೋನಿಗೆ ಬದಲಿಯಾಗಿ ತರಲು ಉದ್ದೇಶಿಸಲಾಗಿತ್ತು.ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರ ನಡುವೆ ಬಿರುಕಿನಿಂದ ಭಾರತದ ಸಾಧನೆಗೆ ಅಡ್ಡಿಯಾಗಿತ್ತೆಂದು ಆಯ್ಕೆದಾರರಿಗೆ ತಿಳಿಸಿದ ಬಳಿಕ ಕೊಹ್ಲಿಯನ್ನು ಧೋನಿ ಬದಲಾಗಿ ತರಬೇಕೆಂದು ಬಯಸಿದ್ದರು. ಇದಲ್ಲದೇ ಕೊಹ್ಲಿ ಯಾವುದೇ ರಾಜಕೀಯದಲ್ಲಿ ಮುಳುಗದೇ ಎರಡೂ ಬಣಗಳಿಂದ ದೂರವುಳಿದಿದ್ದರೆಂದು ಹೇಳಲಾಗಿತ್ತು. 
 

Share this Story:

Follow Webdunia kannada