Webdunia - Bharat's app for daily news and videos

Install App

ಜಿಂಬಾಬ್ವೆ ಪ್ರವಾಸಕ್ಕೆ ಧೋನಿ, ಕೊಹ್ಲಿಗೆ ವಿಶ್ರಾಂತಿ, ರಹಾನೆಗೆ ಸಾರಥ್ಯ

Webdunia
ಸೋಮವಾರ, 29 ಜೂನ್ 2015 (13:39 IST)
ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಭಾರತದ ಕಿರು ಓವರುಗಳ ಸರಣಿಯ ಜಿಂಬಾಬ್ವೆ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದೆ. ಅಜಿಂಕ್ಯಾ ರಹಾನೆ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಾರೆ. ಬಿಸಿಸಿಐ ಹರ್ಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ರಾಷ್ಟ್ರೀಯ ಆಯ್ಕೆದಾರರು ನವದೆಹಲಿಯಲ್ಲಿ ಸೋಮವಾರ ತಂಡವನ್ನು ಆಯ್ಕೆ ಮಾಡಿದರು. 
 
 ಭಾರತ ಜುಲೈ 10ರಿಂದ ಮೂರು ಏಕದಿನಗಳನ್ನು ಮತ್ತು ಎರಡು ಟಿ20 ಪಂದ್ಯಗಳನ್ನು ಆಡಲಿದೆ. ತಂಡದ ನಿರ್ದೇಶಕ ರವಿ ಶಾಸ್ತ್ರಿ ಈ ಬಾರಿ ಜೊತೆಯಲ್ಲಿ ತೆರಳುವುದಿಲ್ಲ. ಬದಲಿಗೆ ಬೆಂಬಲ ಸಿಬ್ಬಂದಿಯಾದ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆರ್. ಶ್ರೀಧರ್ ತಂಡವನ್ನು ಜತೆಗೂಡುತ್ತಾರೆ.  2016ರ ಐಸಿಸಿ ವಿಶ್ವ ಟಿ 20ಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ತಿಳಿಸಿದರು. 
 
ಧೋನಿ ರಾಜೀನಾಮೆ ಪ್ರಸ್ತಾಪದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಮತ್ತು ಮಾಧ್ಯಮದಲ್ಲಿ ವರದಿಯಾಗಿರುವಂತೆ ತಂಡದಲ್ಲಿ ಯಾವುದೇ ಬಿರುಕು ಮೂಡಿಲ್ಲ ಎಂದು ಸಂದೀಪ್ ಹೇಳಿದರು. ಧೋನಿ ಅವರಿಗೆ ಕೂಡ ವಿಶ್ರಾಂತಿ ನೀಡಿರುವುದರಿಂದ ರಹಾನೆ ನಾಯಕರಾಗಿದ್ದಕ್ಕೆ ಹೆಚ್ಚು ಅರ್ಥ ಕಲ್ಪಿಸಬೇಡಿ ಎಂದು ಸಂದೀಪ್ ಹೇಳಿದರು.
 
ಭಾರತ ಎ ತಂಡದ ಆಟಗಾರರನ್ನು ಕೂಡ ಆಯ್ಕೆದಾರರು ಹೆಸರಿಸಿದ್ದು, ಚೇತೇಶ್ವರ ಪೂಜಾರಾ ಅದರ ನಾಯಕತ್ವ ವಹಿಸುತ್ತಾರೆ. ತಂಡ: ರಹಾನೆ(ನಾಯಕ), ರಾಯುಡು, ಮನೋಜ್, ಕೇದಾರ್, ಉತ್ತಪ್ಪಾ, ಮನೀಶ್, ಹರ್ಭಜನ್, ಅಕ್ಸರ್ ಪಟೇಲ್, ಧವಲ್, ಬಿನ್ನಿ, ಭುವಿ, ಮೋಹಿತ್, ಸಂದೀಪ್. 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments