Webdunia - Bharat's app for daily news and videos

Install App

ಧವನ್ ಭರ್ಜರಿ ಶತಕ, ದ.ಆಫ್ರಿಕಾ ವಿರುದ್ಧ ಭಾರತ ಐತಿಹಾಸಿಕ ಜಯಭೇರಿ

Webdunia
ಭಾನುವಾರ, 22 ಫೆಬ್ರವರಿ 2015 (14:16 IST)
ಭಾರತ  ಮತ್ತು ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್ ಪಂದ್ಯದಲ್ಲಿ ಶಿಖರ್ ಧವನ್  ಅವರ ಭರ್ಜರಿ 137 ರನ್ ಮತ್ತು ಅಜಿಂಕ್ಯ ರೆಹಾನೆ ಅವರ 79 ರನ್ ನೆರವಿನಿಂದ ಹಾಗೂ ಮೋಹಿತ್ ಶರ್ಮಾ ಮತ್ತು ಅಶ್ವಿನ್  ಅವರ ಮಾರಕ ಬೌಲಿಂಗ್ ದಾಳಿಗೆ ಬಲಿಯಾದ  ದಕ್ಷಿಣಆಫ್ರಿಕಾ  ವಿರುದ್ಧ  ಭಾರತ ಐತಿಹಾಸಿಕ ಗೆಲುವು ಗಳಿಸಿದೆ.

ದಕ್ಷಿಣ ಆಫ್ರಿಕಾ 177 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್  ಕಳೆದುಕೊಂಡು ಭಾರತ 130 ರನ್ ಭರ್ಜರಿ ಜಯಗಳಿಸುವ ಮೂಲಕ ಭಾರತ ಈ ಬಾರಿಯೂ ವಿಶ್ವಕಪ್‌ನಲ್ಲಿ ಜಯಗಳಿಸುವ ಲಕ್ಷಣಗಳನ್ನು ತೋರಿಸಿದೆ.  ಸತತ ಮೂರು ವಿಶ್ವ ಕಪ್‌ಗಳಲ್ಲಿ ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವಿಗೆ ಬ್ರೇಕ್ ಬಿದ್ದಿದೆ. ಈ ಮೂಲಕ ಸತತ ಮೂರು ಬಾರಿ ಸೋತಿದ್ದ ಟೀಂ ಇಂಡಿಯಾ ಗೆಲುವಿನ ಖಾತೆಯನ್ನು ತೆರೆದು ವಿಶ್ವ ಕಪ್ ಗೆದ್ದುಕೊಳ್ಳುವುದಕ್ಕೆ ಮುನ್ನುಡಿ ಬರೆದಿದೆ.

ಭಾರತದ 307 ರನ್ ಬೆನ್ನಟ್ಟಿದ  ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಆರಂಭದಲ್ಲೇ ಶಮಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಹಶೀಮ್ ಆಮ್ಲಾ ರೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ಶಮಿಗೆ ಕ್ಯಾಚಿತ್ತು ಔಟಾಗಿದ್ದರಿಂದ  ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 44  ರನ್ ಗಳಿಸಿತ್ತು. 

ಡಿ ವಿಲಿಯರ್ಸ್ ಮತ್ತು ಪ್ಲೆಸಿಸ್ ಉತ್ತಮ ಜೊತೆಯಾಟದಿಂದ ಒಂದು ಹಂತದಲ್ಲಿ ದ.ಆಫ್ರಿಕಾ ಉತ್ತಮ ಸ್ಕೋರ್ ಕಲೆಹಾಕುವ ವಿಶ್ವಾಸ ಮೂಡಿತ್ತು. ಆದರೆ ಡಿ ವಿಲಿಯರ್ಸ್ ಅವರನ್ನು ಧೋನಿ ರನೌಟ್ ಮಾಡಿದ ಬಳಿಕ ಟೀಂ ಇಂಡಿಯಾಗೆ ಗೆಲುವಿನ ಭರವಸೆ ಮೂಡಿತು. ನಂತರ ಪ್ಲೇಸಿಸ್ ಶರ್ಮಾ ಎಸೆತದಲ್ಲಿ ಧವನ್‌ಗೆ ಸುಲಭ ಕ್ಯಾಚಿತ್ತು ಔಟಾದರು. ಡೇವಿಟ್ ಮಿಲ್ಲರ್ ಕೂಡ ಉಮೇಶ್  ಎಸೆತಕ್ಕೆ ಧೋನಿ ಸ್ಟಂಪ್ ಮಾಡಿದ್ದರಿಂದ ಔಟಾದರು. ಉಳಿದಂತೆ ದ. ಆಫ್ರಿಕಾ ಆಟಗಾರರು ಬೇಗನೇ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಮೊಹಮದ್ ಶಮಿ ಮತ್ತು ಮೋಹಿತ್ ಶರ್ಮಾ ತಲಾ ಎರಡು ವಿಕೆಟ್ ಗಳಿಸಿದರೆ ಅಶ್ವಿನ್ 3 ವಿಕೆಟ್ ಗಳಿಸಿ ಅಗ್ರಮಾನ್ಯ ಬೌಲರ್ ಎನಿಸಿದರು. ಜಡೇಜಾ ಒಂದು ವಿಕೆಟ್ ಪಡೆದರು. 

 ಮೊದಲಿಗೆ ಬ್ಯಾಟಿಂಗ ಮಾಡಿದ ಟೀಂ ಇಂಡಿಯಾದ  ಶಿಖರ್ ಧವನ್  ಅವರು ಅಬ್ಬರದ ಬ್ಯಾಟಿಂಗ್ ಆಡಿ 146 ಎಸೆತಗಳಲ್ಲಿ  137 ರನ್ ಗಳಿಸಿ ಪಾರ್ನೆಲ್  ಬೌಲಿಂಗ್‌ನಲ್ಲಿ ಹಶೀಂ ಆಮ್ಲಾ ಅವರಿಗೆ ಕ್ಯಾಚಿತ್ತು ಔಟಾದರು. ಅವರ ಸ್ಕೋರಿನಲ್ಲಿ 16 ಬೌಂಡರಿಗಳು ಮತ್ತು 2 ಸಿಕ್ಸರುಗಳಿದ್ದವು.  ಅಜಿಂಕ್ಯ ರಹಾನೆ ಅತೀ ವೇಗದಲ್ಲಿ 60 ಎಸೆತಗಳಲ್ಲಿ 79 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 7 ಬೌಂಡರಿಗಳು ಮತ್ತು 3 ಸಿಕ್ಸರುಗಳಿದ್ದವು.

ಆರಂಭದಲ್ಲಿ ರೋಹಿತ್ ಶರ್ಮಾ ಡಿ ವಿಲಿಯರ್ಸ್ ಅವರು ವಿಕೆಟ್‌ಗೆ ನೇರವಾಗಿ ಎಸೆತದಿಂದ ರನೌಟ್ ಆದ ಬಳಿಕ ಧವನ್ ಮತ್ತು ಕೊಹ್ಲಿ ಉತ್ತಮ ಜೊತೆಯಾಟವಾಡಿದರು. ಕೊಹ್ಲಿ 46 ರನ್‌ಗಳಾಗಿದ್ದಾಗ ಇಮ್ರಾನ್ ತಾಹಿರ್ ಬೌಲಿಂಗ್‌ನಲ್ಲಿ ಮಿಡಾನ್‌ನಲ್ಲಿ ಪ್ಲೆಸಿಸ್‌ಗೆ ಕ್ಯಾಚಿತ್ತು ಔಟಾದರು. ನಂತರ ಆಡಲಿಳಿದ ರಹಾನೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ, ದಕ್ಷಿಣ ಆಫ್ರಿಕಾ ಬೌಲರುಗಳನ್ನು ಮನಬಂದಂತೆ ದಂಡಿಸಿದರು.

ಸ್ಟೇಯ್ನ್  ಎಸೆತದಲ್ಲಿ ಬೌಂಡರಿ ಬಾರಿಸಲು ಯತ್ನಿಸಿದ ರೆಹಾನೆ ಎಲ್‌ಬಿಡಬ್ಲ್ಯುಗೆ ಔಟಾದರು. ಅದಾದ ನಂತರ, ಆಡಲಿಳಿದ ರೈನಾ  6 ರನ್ ,ಧೋನಿ 18 ರನ್ ಮತ್ತು ಜಡೇಜಾ ರನೌಟ್ 2 ರನ್‌‍ನೊಂದಿಗೆ ಪೆವಿಲಿಯನ್ ಹಾದಿ ಹಿಡಿದಿದ್ದರಿಂದ ಭಾರತದ ಏಳು ವಿಕೆಟ್ ಉರುಳಿತ್ತು. ವಿಕೆಟ್ ಉಳಿಸಿಕೊಂಡಿದ್ದರೆ ಭಾರತಕ್ಕೆ ಇನ್ನಷ್ಟು ಹೆಚ್ಚಿನ ಮೊತ್ತ ಕಲೆಹಾಕುವ ಅವಕಾಶವಿತ್ತು. ರವಿಚಂದ್ರನ್ ಅಶ್ವಿನ್ ಮತ್ತು ಶಮಿ ಅಜೇಯ 5 ಮತ್ತು 4 ರನ್ ಗಳಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments