Select Your Language

Notifications

webdunia
webdunia
webdunia
webdunia

ಅತ್ಯಧಿಕ 20 ಸಿಕ್ಸರುಗಳ ಮೂಲಕ ಹೇಡನ್ ದಾಖಲೆಯನ್ನು ಮುರಿದ ಡಿ ವಿಲಿಯರ್ಸ್

ಅತ್ಯಧಿಕ 20 ಸಿಕ್ಸರುಗಳ ಮೂಲಕ ಹೇಡನ್ ದಾಖಲೆಯನ್ನು ಮುರಿದ ಡಿ ವಿಲಿಯರ್ಸ್
ಸಿಡ್ನಿ , ಶುಕ್ರವಾರ, 13 ಮಾರ್ಚ್ 2015 (12:37 IST)
ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿ ವಿಲಿಯರ್ಸ್  ವಿಶ್ವಕಪ್‌ನ ಏಕಮಾತ್ರ ಆವೃತ್ತಿಯಲ್ಲಿ ಅತ್ಯಧಿಕ ಸಂಖ್ಯೆಯ 20 ಸಿಕ್ಸರುಗಳನ್ನು ಬಾರಿಸುವ ಮೂಲಕ ಇನ್ನೊಂದು ದಾಖಲೆಯನ್ನು ಮುರಿದಿದ್ದಾರೆ.  2008ನೇ ವಿಶ್ವಕಪ್ ಆವೃತ್ತಿಯಲ್ಲಿ ಮ್ಯಾಥೀವ್ ಹೇಡನ್ ಅವರ 18 ಸಿಕ್ಸರುಗಳ ದಾಖಲೆಯನ್ನು ಅವರು ಮುರಿದರು.
 
ಬಲಗೈ ಆಟಗಾರ ಡಿ ವಿಲಿಯರ್ಸ್ ಎಲ್ಲಾ ವಿಶ್ವಕಪ್ ಆವೃತ್ತಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಗರಿಷ್ಠ ಸಿಕ್ಸರುಗಳನ್ನು (36) ಬಾರಿಸುವ ಮೂಲಕ ಇನ್ನೊಂದು ದಾಖಲೆಯನ್ನು ಹೊಂದಿದ್ದಾರೆ.  ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ  ನಾಯಕ ರಿಕಿ ಪಾಂಟಿಂಗ್ 31 ಸಿಕ್ಸರುಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 
 
 ಈ ವರ್ಷದ ಪಂದ್ಯಾವಳಿಯಲ್ಲಿ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ ಡಿ ವಿಲಿಯರ್ಸ್ ಉತ್ತಮ ಸ್ಕೋರ್ ಮಾಡದಿದ್ದರೂ  ವೆಸ್ಟ್ ಇಂಡೀಸ್ ವಿರುದ್ಧ  ಮೂರನೇ ಪಂದ್ಯದಲ್ಲಿ ಅವರು ಬೌಲರುಗಳ ಬೆವರಿಳಿಸಿ 8 ಸಿಕ್ಸರುಗಳ ಮೂಲಕ ಅಜೇಯ 162 ರನ್ ಗಳಿಸಿದ್ದರು. 
 
ಐರ್ಲೆಂಡ್ ವಿರುದ್ಧ ಮುಂದಿನ ಎನ್‌ಕೌಂಟರ್‌ನಲ್ಲಿ ಅವರು ಪುನಃ ಎರಡು ಸಿಕ್ಸರುಗಳನ್ನು ಬಾರಿಸಿದ್ದು 24 ರನ್‌ಗೆ ಔಟಾದರು.  ಪಾಕಿಸ್ತಾನದ ವಿರುದ್ಧ ಆಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 6 ಸಿಕ್ಸರುಗಳ ಮೂಲಕ 77 ರನ್ ಸ್ಕೋರ್ ಮಾಡಿದರು.  ಗುರುವಾರ ಯುಎಇ ವಿರುದ್ಧ ಪಂದ್ಯದಲ್ಲಿ ಅವರು ಕೇವಲ ಒಂದು ರನ್ ಅಂತರದಿಂದ ಶತಕವಂಚಿತರಾದರೂ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹೇಡನ್ ಅವರ ದಾಖಲೆಯನ್ನು ಮುರಿದರು.

 31 ವರ್ಷ ವಯಸ್ಸಿನ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 50, 100 ಮತ್ತು 150 ರನ್ ಬಾರಿಸಿದ ದಾಖಲೆಗಳನ್ನು ಹೊಂದಿದ್ದು,  ವಿಶ್ವಕಪ್ ಅಗ್ರ ಹತ್ತು ಸರ್ವಕಾಲಿಕ ಸ್ಕೋರರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು 1142 ರನ್‌ಗಳನ್ನು ಮುಟ್ಟಿದ್ದಾರೆ. 

Share this Story:

Follow Webdunia kannada