Webdunia - Bharat's app for daily news and videos

Install App

ಡೆಲ್ಲಿ ಡೇರ್‌ ಡೆವಿಲ್ಸ್‌ಗೆ ರೈಸಿಂಗ್ ಪುಣೆ ವಿರುದ್ಧ ಸೋಲು: ಪ್ಲೇ ಆಫ್ ಹಾದಿ ಕಠಿಣ

Webdunia
ಬುಧವಾರ, 18 ಮೇ 2016 (11:53 IST)
ಅಡಾಂ ಜಂಪಾ ಮತ್ತು ಅಶೋಕ್ ದಿಂಡಾ ತಲಾ ಮೂರು ವಿಕೆಟ್ ಕಬಳಿಕೆ ಮತ್ತು ಅಜಿಂಕ್ಯಾ ರಹಾನೆ ಅವರ ಅಜೇಯ 42 ರನ್ ನೆರವಿನಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಡಕ್‌ವರ್ತ್ ಲೆವಿಸ್ ನಿಯಮದಡಿ 19 ರನ್‌ಗಳಿಂದ ಗೆದ್ದಿದೆ.

ಎಡಗೈ ಸ್ಪಿನ್ನರ್ ಜಂಪಾ(3/21) ಮತ್ತು ವೇಗಿ ದಿಂಡಾ(3/20) ಪುಣೆ ಪರ ಶಿಸ್ತಿನ ಬೌಲಿಂಗ್ ಪ್ರದರ್ಶನ ಮಾಡಿ ಡೇರ್‌ಡೆವಿಲ್ಸ್ ತಂಡವನ್ನು 6 ವಿಕೆಟ್‌ಗೆ 121ರ ಅಲ್ಪಮೊತ್ತಕ್ಕೆ ಔಟ್ ಮಾಡಿದರು.

ಬಳಿಕ ರಹಾನೆ 42 ಅಜೇಯ ರನ್ ನೆರವಿನಿಂದ ತಂಡಕ್ಕೆ ಗೆಲುವನ್ನು ತಂದಿತ್ತರು. ರಹಾನೆ ನಾಲ್ಕು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಮೂಲಕ 36 ಎಸೆತಗಳಲ್ಲಿ 42 ರನ್ ಬಾರಿಸಿ ಇನ್ನಿಂಗ್ಸ್ ಕಟ್ಟಿದರು. ರೈಸಿಂಗ್ ಪುಣೆ 11 ಓವರುಗಳಲ್ಲಿ 76 ರನ್‌ಗಳಾಗಿದ್ದಾಗ ಎರಡನೇ ಬಾರಿ ಮಳೆರಾಯನ ಅಡ್ಡಿಯಿಂದ ಅಂಪೈರ್‌ಗಳು ಆಟವನ್ನು ನಿಲ್ಲಿಸಿದರು.  ಮೊದಲ ಮಳೆಯ ಅಡ್ಡಿಯುಂಟಾದಾಗ  ಪುಣೆ 8.2 ಓವರುಗಳಲ್ಲಿ 1 ವಿಕೆಟ್‌ಗೆ 57 ರನ್ ಗಳಿಸಿತ್ತು.

ಸುಮಾರು ಒಂದು ಗಂಟೆಯ ವಿರಾಮದ ಬಳಿಕ ಇನ್ನೆರಡು ಓವರುಗಳನ್ನು ಆಡುವಷ್ಟರಲ್ಲಿ ಮಳೆ ಪುನಃ ಬರಲಾರಂಭಿಸಿತು. ರಹಾನೆ ಮತ್ತು ಬೈಲಿ 16 ಎಸೆತಗಳಲ್ಲಿ 19 ರನ್ ಸೇರಿಸಿ ಸ್ಕೋರನ್ನು 76ಕ್ಕೆ ತಂದು ನಿಲ್ಲಿಸಿದ್ದರು.
 
ಮಳೆ ಸತತವಾಗಿ ಬೀಳಲಾರಂಭಿಸಿದಾಗ, ಡಕ್‌ವರ್ತ್ ಲೆವಿಸ್ ವಿಧಾನದ ಮೂಲಕ ಪುಣೆಯ ಗೆಲುವನ್ನು ಘೋಷಿಸಲಾಯಿತು.
 ಡೇರ್‌ಡೆವಿಲ್ಸ್ ತಂಡಕ್ಕೆ ಈ ನಷ್ಟದಿಂದ ಪ್ಲೇ ಆಫ್ ಪ್ರವೇಶಿಸುವುದು ಕಷ್ಟವಾಗಿದ್ದು, ಅದು 12 ಪಂದ್ಯಗಳಲ್ಲಿ 12 ಪಾಯಿಂಟ್‌‍ಗಳಿಂದ 6ನೇ ಸ್ಥಾನದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕೆ ಕ್ಯೂನಲ್ಲಿ ನಿಂತಿರುವ ಟೀಂ ಇಂಡಿಯಾ ಕ್ರಿಕೆಟಿಗರು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

Virat Kohli, ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ: ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

ಮುಂದಿನ ಸುದ್ದಿ
Show comments