Select Your Language

Notifications

webdunia
webdunia
webdunia
webdunia

ಡಿ ವಿಲಿಯರ್ಸ್ ಕಳಪೆ ನಾಯಕತ್ವದಿಂದ ದ.ಆಫ್ರಿಕಾಗೆ ಸೋಲು: ಲಕ್ಷ್ಮಣ್

ಡಿ ವಿಲಿಯರ್ಸ್ ಕಳಪೆ ನಾಯಕತ್ವದಿಂದ ದ.ಆಫ್ರಿಕಾಗೆ ಸೋಲು: ಲಕ್ಷ್ಮಣ್
ಮೆಲ್ಬರ್ನ್ , ಸೋಮವಾರ, 23 ಫೆಬ್ರವರಿ 2015 (13:29 IST)
ಎ.ಬಿ. ಡಿವಿಲಿಯರ್ಸ್ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲೂ ಅಗ್ರಮಾನ್ಯರು. ಆದರೆ ಅತ್ಯಂತ ಪ್ರಮುಖ ವಿಶ್ವಕಪ್‌ನ ನಾಯಕತ್ವದ ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದಾರೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಅವರ ನಾಯಕತ್ವವನ್ನು ಟೀಕಿಸಿದ ಲಕ್ಷ್ಮಣ್ ಡಿ ವಿಲಿಯರ್ಸ್ ರಕ್ಷಣಾತ್ಮಕ ಆಟದಿಂದ ಮತ್ತು ಕೆಲವು ವಿಚಿತ್ರ ತಂತ್ರಗಳಿಂದ ಪ್ರೊಟೀಸ್ 130 ರನ್‌ಗಳಿಂದ ಸೋಲಪ್ಪಿದೆ ಎಂದು ಹೇಳಿದರು.ಪ್ರೊಟೀಸ್ ನಾಯಕ ಡಿ ವಿಲಿಯರ್ಸ್ ಅರೆಕಾಲಿಕ ಸ್ಪಿನ್ನರ್ ಡುಮಿನಿ ಅವರನ್ನು  ಮಾರ್ಕೆಲ್‍‌ಗೆ  ಮುಂಚಿತವಾಗಿ  ಬೌಲಿಂಗ್‌ಗೆ ಇಳಿಸಿ ಏಳು ನಿಷ್ಫಲ ಓವರುಗಳನ್ನು ಬೌಲ್ ಮಾಡಿಸಿದರು.

ಇದು ಧವನ್ ಮತ್ತು ಕೊಹ್ಲಿ ಅವರಿಗೆ ಎರಡನೇ ವಿಕೆಟ್‌ಗೆ 127 ರನ್ ಜೊತೆಯಾಟಕ್ಕೆ ಆಸ್ಪದ ಕಲ್ಪಿಸಿತು ಎಂದರು. ದಕ್ಷಿಣ ಆಫ್ರಿಕಾ ಪ್ರತಿಭಾಶಾಲಿ ತಂಡ. ಆದರೆ ಅವರ ಮನಸ್ಥಿತಿ ನೋಡಿ ನನಗೆ ನಿರಾಶೆಯಾಗಿದೆ. ಸ್ಪಿನ್ನರ್ ಅವರನ್ನು ಅಷ್ಟು ಬೇಗ ಬೌಲ್ ಮಾಡಿಸಿದ್ದು ರಕ್ಷಣಾತ್ಮಕ ಮನೋಭಾವ ಮತ್ತು ತಪ್ಪು ಸಂದೇಶವನ್ನು ಮುಟ್ಟಿಸುತ್ತದೆ ಎಂದು ಲಕ್ಷ್ಮಣ್ ಹೇಳಿದರು. 

Share this Story:

Follow Webdunia kannada