ಏಕದಿನ ವಿಶ್ವಕಪ್: ಅಫ್ಘನ್ ವಿರುದ್ಧ ಸೋಲಿನ ಭೀತಿಯಲ್ಲಿ ಇಂಗ್ಲೆಂಡ್

Webdunia
ಭಾನುವಾರ, 15 ಅಕ್ಟೋಬರ್ 2023 (20:40 IST)
Photo Courtesy: Twitter
ನವದೆಹಲಿ: ಏಕದಿನ ವಿಶ್ವಕಪ್ ನ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ಬ್ಯಾಟಿಂಗ್ ಸಂಪೂರ್ಣ ಕೈ ಕೊಟ್ಟಿದ್ದು, ಸೋಲಿನ ಭೀತಿಯಲ್ಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 284 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಗುರ್ಬಾಝ್ 80, ಇಕ್ರಮ್ ಅಖಿಲಿ 58 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದೆ. ಅಗ್ರಕ್ರಮಾಂಕದ ಬ್ಯಾಟಿಗರಾದ ಜಾನಿ ಬೇರ್ ಸ್ಟೋ (2), ಡೇವಿಡ್ ಮಲನ್ (32), ಜೋ ರೂಟ್ (11), ಜೋಸ್ ಬಟ್ಲರ್ 9, ಲಿಯಾಮ್ ಲಿವಿಂಗ್ ಸ್ಟೋನ್, ಸ್ಯಾಮ್ ಕ್ಯುರೇನ್ ತಲಾ 10 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಹ್ಯಾರಿ ಬ್ರೂಕ್ 63 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಇಂಗ್ಲೆಂಡ್ ಗೆಲುವು ಕಷ್ಟ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಕೊನೆಗೂ ಟಾಸ್ ಗೆದ್ದ ಟೀಂ ಇಂಡಿಯಾ, ಕೆಎಲ್ ರಾಹುಲ್ ಸೆಲೆಬ್ರೇಷನ್ ನೋಡಿ video

IND vs SA: ಟೀಂ ಇಂಡಿಯಾ ಇಂದು ಸರಣಿ ಗೆಲ್ಲಲು ಈ ಬದಲಾವಣೆ ಮಾಡಲೇಬೇಕು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ಮುಂದಿನ ಸುದ್ದಿ
Show comments