Select Your Language

Notifications

webdunia
webdunia
webdunia
webdunia

100 ಅತ್ಯಧಿಕ ಗಳಿಕೆಯ ಕ್ರೀಡಾಪಟುಗಳ ಪೈಕಿ ಧೋನಿಗೆ 23ನೇ ಸ್ಥಾನ

100 ಅತ್ಯಧಿಕ ಗಳಿಕೆಯ ಕ್ರೀಡಾಪಟುಗಳ ಪೈಕಿ ಧೋನಿಗೆ 23ನೇ ಸ್ಥಾನ
ನವದೆಹಲಿ , ಗುರುವಾರ, 11 ಜೂನ್ 2015 (14:36 IST)
ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಫೋರ್ಬ್ಸ್ ನಿಯತಕಾಲಿಕೆಯ ಜಗತ್ತಿನಲ್ಲೇ ಅತ್ಯಧಿಕ ಗಳಿಕೆಯ 100 ಕ್ರೀಡಾಪಟುಗಳ ಪೈಕಿ ಒಬ್ಬರಾಗಿದ್ದಾರೆ.  ಧೋನಿ ಅವರೊಬ್ಬರೇ ಪಟ್ಟಿಯಲ್ಲಿರುವ ಏಕಮಾತ್ರ ಭಾರತೀಯ ಕ್ರೀಡಾಪಟು. ಅತ್ಯಧಿಕ ಗಳಿಕೆಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಮೆರಿಕದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಅಗ್ರಸ್ಥಾನ ಅಲಂಕರಿಸಿದ್ದರೆ, ಗಾಲ್ಫ್ ಆಟಗಾರ ಟೈಗರ್ ವುಡ್ಸ್, ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್ ಮತ್ತು ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಾರೆ.

ಧೋನಿ ಪೋರ್ಬ್ಸ್ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದಾರೆ. ಧೋನಿಯ ಒಟ್ಟು ಗಳಿಕೆ  31 ದಶಲಕ್ಷ ಅಮೆರಿಕ ಡಾಲರ್. ಅದರಲ್ಲಿ ವೇತನ/ಗೆಲುವುಗಳಿಂದ 4 ದಶಲಕ್ಷ ಡಾಲರ್ ಮತ್ತು 27 ದಶಲಕ್ಷ ಡಾಲರ್ ಮೌಲ್ಯದ ಒಪ್ಪಂದಗಳು ಸೇರಿವೆ. 
 
33 ವರ್ಷದ ಕ್ರಿಕೆಟ್ ಆಟಗಾರ 2014ರ ಕೊನೆಯಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ವಿರಾಟ್ ಕೊಹ್ಲಿಗೆ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಆದರೆ ಧೋನಿ ಏಕ ದಿನ ಪಂದ್ಯಗಳು ಮತ್ತು ಟಿ20 ಮಟ್ಟದ ಪಂದ್ಯಗಳಿಗೆ ನಾಯಕರಾಗಿ ಉಳಿಯಲಿದ್ದಾರೆ.
 
 ಧೋನಿಯ ಗಳಿಕೆ ಅಂಕಿಅಂಶಗಳಲ್ಲಿ 2014 ಮತ್ತು 2015ರ ಜೂನ್ ನಡುವೆ  ವೇತನ, ಬಹುಮಾನದ ಹಣ ಮತ್ತು ಬೋನಸ್‌ ಪಾವತಿ ಮಾಡಿದ್ದು ಕೂಡ ಸೇರಿದೆ. ಮೇವೆದರ್ 300 ದಶಲಕ್ಷ ಡಾಲರ್ ಗಳಿಕೆಯೊಂದಿಗೆ ಈ ವರ್ಷ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಮೇವೆದರ್ ಶ್ರೇಯಾಂಕದಲ್ಲಿ  ವಿಶ್ವದ ಅತ್ಯಧಿಕ ವೇತನದ ಅಥ್ಲೇಟ್ ಎನಿಸಿದ್ದಾರೆಂದು ಫೋರ್ಬ್ಸ್ ಹೇಳಿದೆ. 
 
 ಮೇವೆದರ್ ಅವರ 300 ದಶಲಕ್ಷ ಡಾಲರ್ ಹಣವು ಅಥ್ಲೇಟ್‌ಗಳ ಮುಂಚಿನ ದಾಖಲೆಗಳನ್ನು ನುಚ್ಚುನೂರು ಮಾಡಿದೆ. ಇದಕ್ಕೆ ಮುಂಚೆ 2008ರಲ್ಲಿ ಟೈಗರ್ ವುಡ್ಸ್ 115 ದಶಲಕ್ಷ ಡಾಲರ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರು. 
 
ಚೀನಾದ ಟೆನ್ನಿಸ್ ಆಟಗಾರ್ತಿ ಲಿ ನಾ ಕಳೆದ ವರ್ಷ ನಿವೃತ್ತಿಯಾದ  ಬಳಿಕ ಕೇವಲ ಇಬ್ಬರು ಮಹಿಳೆಯರು ಮಾತ್ರ  2015ರ ಫೋರ್ಬ್ಸ್ ಪಟ್ಟಿಯಲ್ಲಿದ್ದಾರೆ. ರಷ್ಯಾದ ವೃತ್ತಿಪರ ಟೆನ್ನಿಸ್ ಆಟಗಾರ್ತಿ ಮೇರಿಯಾ ಶರಪೋವಾ 26ನೇ ಸ್ಥಾನದಲ್ಲಿ 29.7 ದಶಲಕ್ಷ ಗಳಿಕೆಯೊಂದಿಗೆ ಅಗ್ರಸ್ಥಾನದ ಮಹಿಳಾ ಆಟಗಾರ್ತಿಯಾಗಿದ್ದಾರೆ. 
 
 ಅಮೆರಿಕದ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ 24.6 ದಶಲಕ್ಷ ಅಮೆರಿಕ ಡಾಲರ್ ಗಳಿಕೆ ಮಾಡಿದ್ದು, ಪಟ್ಟಿಯಲ್ಲಿ 47ನೇ ಸ್ಥಾನದಲ್ಲಿದ್ದಾರೆ.  ಬಾಕ್ಸರ್ ಪ್ಯಾಕ್ವಿಯೋ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 160 ದಶಲಕ್ಷ ಡಾಲರಕ್ ಗಳಿಕೆ ಮಾಡಿದ್ದು, ಅವರ ಬೆನ್ನಹಿಂದೆ ರಿಯಲ್ ಮ್ಯಾಡ್ರಿಡ್‌ನ ರೊನಾಲ್ಡೊ 79.6 ದಶಲಕ್ಷ ಡಾಲರ್ ಗಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

Share this Story:

Follow Webdunia kannada