Webdunia - Bharat's app for daily news and videos

Install App

ದಕ್ಷಿಣ ಆಫ್ರಿಕಾ ಕ್ರಿಕೆಟ್ ನೆರೆಯ ಜಿಂಬಾಬ್ವೆಗೆ ನೆರವಾಗುತ್ತಿಲ್ಲ: ಮಕಾಯ ಟಿನಿ ಟೀಕೆ

Webdunia
ಸೋಮವಾರ, 13 ಜೂನ್ 2016 (11:29 IST)
ದಕ್ಷಿಣ ಆಫ್ರಿಕಾ ಕ್ರಿಕೆಟ್ ನೆರೆಯ ಜಿಂಬಾಬ್ವೆ ತಂಡಕ್ಕೆ ಯಾವುದೇ ರೀತಿಯ ನೆರವು ನೀಡುತ್ತಿಲ್ಲ ಎಂದು ಪ್ರೊಟೀಸ್ ಮಾಜಿ ವೇಗಿ ಮಕಾಯ ಟಿನಿ ಅಭಿಪ್ರಾಯಪಟ್ಟಿದ್ದಾರೆ. ಜಿಂಬಾಬ್ವೆ ರಾಷ್ಟ್ರೀಯ ತಂಡಕ್ಕೆ ನಾಲ್ಕು ತಿಂಗಳ ಕಾಲ ಬೌಲಿಂಗ್ ಕೋಚ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಟಿನಿ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ನೆರೆಯ ಜಿಂಬಾಬ್ವೆ ಕ್ರಿಕೆಟ್‌ನಲ್ಲಿ  ಹೆಣಗಾಡುತ್ತಿದ್ದರೂ  ದಕ್ಷಿಣ ಆಫ್ರಿಕಾ ಕುರುಡಾಗಿದೆ ಎಂದು ಅವರು ಟೀಕಿಸಿದರು. 
 
ದಕ್ಷಿಣ ಆಫ್ರಿಕಾ ಜಿಂಬಾಬ್ವೆ ಜತೆ ಆಡುವುದಕ್ಕೆ ಇಲ್ಲಿಗೆ ಭೇಟಿ ನೀಡಲು ಇಷ್ಟಪಡುತ್ತಿಲ್ಲ.  2ವರ್ಷಗಳ ಹಿಂದೆ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಜತೆ ತ್ರಿಸರಣಿಯಲ್ಲಿ ಆಡುವುದಕ್ಕೆ ಜಿಂಬಾಬ್ವೆಗೆ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಹಿಂದೇಟು ಹಾಕಿತ್ತು ಎಂದು ಟಿನಿ ಹೇಳಿದರು. ಆ ಸರಣಿಯಿಂದ ಅವರು ಹಿಂದೆ ಸರಿಯಲು ಪ್ರಯತ್ನಿಸಿದ್ದಕ್ಕೆ ಕಾರಣವೇನು, ಅವರು ಜಿಂಬಾಬ್ವೆಗೆ ಬೆಂಬಲಿಸದಿರಲು ಕಾರಣವೇನು ಎಂದು ತಿಳಿಯಬಯಸುತ್ತೇನೆ ಎಂದು ಟಿನಿ ನುಡಿದರು.
 
ಸ್ಟೀಫನ್ ಮೊಂಗೊಗೊ ಮತ್ತು ವಾಟ್‌ಮೋರ್ ಬಳಿಕ ಟಿನಿ ಮೂರನೇ ಜಿಂಬಾಬ್ವೆ ಕೋಚ್ ಆಗಿದ್ದು, ಪ್ರೊಟೀಸ್ ಸಹಆಟಗಾರ ಕ್ಲುಸೆನರ್ ಬೆಂಬಲದೊಂದಿಗೆ ಮೊದಲ ಕಪ್ಪುವರ್ಣೀಯ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಆಟಗಾರ, ಯುವ ಜಿಂಬಾಬ್ವೆ ತಂಡದ ಚೈತನ್ಯವನ್ನು ಹೆಚ್ಚಿಸುವ ಆಶಾವಾದ ವ್ಯಕ್ತಪಡಿಸಿದರು.
 
 ಪ್ರೊಟೀಸ್‌ನಲ್ಲಿ ಮೊದಲ ಕಪ್ಪುವರ್ಣೀಯ ಆಟಗಾರ ಮತ್ತು ಅಂತಾರಾಷ್ಟ್ರೀಯ ಕೋಚ್ ಆಗಿರುವ ಮೊದಲ ದಕ್ಷಿಣ ಆಫ್ರಿಕನ್  ಎಂಬ ವಿಶೇಷಣವನ್ನು ತಳ್ಳಿಹಾಕಿದ ಟಿನಿ ಇವೆಲ್ಲಾ ಮುಜುಗರ ಉಂಟುಮಾಡುತ್ತದೆ ಎಂದು ನುಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭುಜಬಲದ ಪರಾಕ್ರಮ ಮೆರೆದ ಮೊಹಮ್ಮದ್‌ ಸಿರಾಜ್‌ಗೆ ಐಸಿಸಿ ಶಾಕ್‌: ನಿಷೇಧದ ಭೀತಿಯಲ್ಲಿ ಭಾರತದ ವೇಗಿ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು

IND vs ENG: ಎಷ್ಟೇ ಕೆಣಕಿದ್ರೂ ನಾನು ಕೇರ್ ಮಾಡಲ್ಲ: ಕೆಎಲ್ ರಾಹುಲ್ ವಿಡಿಯೋ ವೈರಲ್

IND vs ENG: ರೋಚಕ ಘಟ್ಟದಲ್ಲಿ ಲಾರ್ಡ್ಸ್ ಟೆಸ್ಟ್, ಟೀಂ ಇಂಡಿಯಾ ಗೆದ್ದರೆ ದಾಖಲೆ

IND vs ENG: ಶುಭಮನ್ ಗಿಲ್ ಈ ವಿಚಾರದಲ್ಲಿ ಥೇಟ್ ಕೊಹ್ಲಿನೇ ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments