Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಜಿ ನಾಯಕ ಕ್ಲೈವ್ ರೈಸ್ ನಿಧನ

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಜಿ ನಾಯಕ ಕ್ಲೈವ್ ರೈಸ್ ನಿಧನ
ಕೇಪ್‌ , ಮಂಗಳವಾರ, 28 ಜುಲೈ 2015 (19:12 IST)
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಕ್ಲೈವ್ ರೈಸ್ ಮಂಗಳವಾರ ಕೇಪ್ ಟೌನ್ ಆಸ್ಪತ್ರೆಯಲ್ಲಿ ಮೆದುಳಿನ ಹುಣ್ಣಿನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 66 ವರ್ಷಗಳಾಗಿತ್ತು.  ಕ್ಯಾನ್ಸರ್ ಸಂಬಂಧಿತ ಹುಣ್ಣಿನ ಚಿಕಿತ್ಸೆ ಸಲುವಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು.  1969ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದ ಬಳಿಕ  1991ರವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರಲಿಲ್ಲ.
 
ಜನಾಂಗೀಯ ಭೇದದ ಕಾರಣದಿಂದ ದಕ್ಷಿಣ ಆಫ್ರಿಕಾಕ್ಕೆ ನಿಷೇಧ ವಿಧಿಸಿದ್ದರಿಂದಾಗಿ ಅವರ ವೃತ್ತಿಜೀವನಕ್ಕೆ ತೊಡಕು ಉಂಟಾಯಿತು. ನಿಷೇಧ ತೆರವು ಮಾಡಿದ ಬಳಿಕ 1991ರಲ್ಲಿ ಭಾರತದ ವಿರುದ್ಧ ಪ್ರಥಮ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ನಾಯಕತ್ವ ವಹಿಸಿದ್ದರು.

1992ರ ವಿಶ್ವಕಪ್ ತಂಡದಲ್ಲಿ ಅವರು ಸ್ಥಾನ ಪಡೆಯಲಿಲ್ಲ. ಮೂರು ಏಕದಿನಗಳಲ್ಲಿ ಆಲ್ರೌಂಡರ್ ರೈಸ್ 26 ರನ್ ಮತ್ತು ಎರಡು ವಿಕೆಟ್ ಗಳಿಸಿದ್ದರು. ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 482 ಪಂದ್ಯಗಳಲ್ಲಿ  40.95 ಸರಾಸರಿಯಲ್ಲಿ  26, 331 ರನ್ ಕಲೆಹಾಕಿದ್ದರು ಮತ್ತು  930 ವಿಕೆಟ್ ಕಬಳಿಸಿದ್ದರು. 

Share this Story:

Follow Webdunia kannada