Select Your Language

Notifications

webdunia
webdunia
webdunia
webdunia

2021ರ ಬಳಿಕ ಚಾಂಪಿಯನ್ಸ್ ಟ್ರೋಫಿ ರದ್ದಾಗುವ ಸಾಧ್ಯತೆ

2021ರ ಬಳಿಕ ಚಾಂಪಿಯನ್ಸ್ ಟ್ರೋಫಿ ರದ್ದಾಗುವ ಸಾಧ್ಯತೆ
ಇಂಗ್ಲೆಂಡ್ , ಗುರುವಾರ, 23 ಜೂನ್ 2016 (17:06 IST)
2021ನೇ ಆವೃತ್ತಿ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ರದ್ದು ಮಾಡುವ ಕುರಿತು ಪರಿಶೀಲನೆ ನಡೆಸಿದೆ. 2013ರಲ್ಲಿ ಪಂದ್ಯಾವಳಿಯನ್ನು ರದ್ದು ಮಾಡಬೇಕಿತ್ತು. ಆದರೆ ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ 2017ರಲ್ಲಿ  ವಿಶ್ವ ಟೆಸ್ಟ್ ಚಾಂಪಿಯನ್‌‍ಷಿಪ್ ಉದ್ಘಾಟನಾ ಪಂದ್ಯಾವಳಿಗೆ ಬದಲು ಇನ್ನೊಂದು ಆವೃತ್ತಿಯನ್ನು ನಡೆಸಲು ನಿರ್ಧರಿಸಲಾಯಿತು.
 
 2019ರಲ್ಲಿ ಏಕದಿನ ಅಂತಾರಾಷ್ಟ್ರೀಯ ಲೀಗ್ ಆರಂಭವಾದರೆ, ಮುಂದಿನ ವರ್ಷದ ಇಂಗ್ಲೆಂಡ್ ಪಂದ್ಯಾವಳಿಯು ಕೊನೆಯದಾಗಲಿದೆ. 
 
ಐಸಿಸಿ 50 ಓವರುಗಳ ಮಾದರಿ ಕ್ರಿಕೆಟ್‌‍ಗೆ ಮೂರು ಸ್ಪರ್ಧೆಗಳಿಗೆ ಒಲವು ತೋರಿಲ್ಲವಾದ್ದರಿಂದ 2012ರ ಆವೃತ್ತಿ ನಡೆಯದೇ ಇರಬಹುದು.  ಚಾಂಪಿಯನ್ಸ್ ಟ್ರೋಫಿಯನ್ನು ಸಾಮಾನ್ಯವಾಗಿ 3 ವಾರಗಳಲ್ಲಿ ಆಡಲಾಗುತ್ತದೆ ಮತ್ತು 15 ಪಂದ್ಯಗಳನ್ನು ಒಳಗೊಂಡಿದೆ. ಮುಂದಿನ ವರ್ಷದ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್ ಬದಲಿಗೆ ಬಾಂಗ್ಲಾದೇಶ ಆಡುತ್ತಿದೆ. ಭಾರತ 2013ರಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಹಾಲಿ ಚಾಂಪಿಯನ್ನರೆನಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ಚುಗಲ್ ತಂಡವನ್ನು ಸೋಲಿನಿಂದ ಪಾರು ಮಾಡಿದ ರೊನಾಲ್ಡೊ