Webdunia - Bharat's app for daily news and videos

Install App

ಕುಸಾಲ್ ಮೆಂಡಿಸ್ ಆಟವನ್ನು ಶ್ಲಾಘಿಸಿದ ನಾಯಕ ಮ್ಯಾಥೀವ್ಸ್

Webdunia
ಸೋಮವಾರ, 1 ಆಗಸ್ಟ್ 2016 (13:38 IST)
ಶ್ರೀಲಂಕಾ ಟಾಪ್ ಶ್ರೇಯಾಂಕದ ಆಸ್ಟ್ರೇಲಿಯಾ ವಿರುದ್ಧ 106 ರನ್ ಗೆಲುವು ಗಳಿಸಿದ ಬಳಿಕ ಶ್ರೀಲಂಕಾ ನಾಯಕ ಏಂಜಲೊ ಮ್ಯಾಥೀವ್ಸ್ ಅವರು ಶತಕವೀರ ಕುಸಾಲ್ ಮೆಂಡಿಸ್ ಆಟವನ್ನು ಮನಸಾರೆ ಶ್ಲಾಘಿಸಿದ್ದಾರೆ. ರಂಗನಾಥ್ ಹೆರಾತ್ ನೇತೃತ್ವದ ಶ್ರೀಲಂಕಾ ಸ್ಪಿನ್ನರ್‌ಗಳು ಮುಖ್ಯ ಪಾತ್ರವಹಿಸಿದ್ದರೂ, ಮೆಂಡಿಸ್ ಆತಿಥೇಯರಿಗೆ ಮುಖ್ಯ ತಿರುವು ಒದಗಿಸಿದ್ದರು.
 
21 ವರ್ಷದ ಮೆಂಡಿಸ್ ಅವರ 176 ರನ್ ಸ್ಕೋರಿನಲ್ಲಿ 21 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 353 ರನ್ ಸ್ಕೋರ್ ಮುಟ್ಟಲು ಸಾಧ್ಯವಾಯಿತು.
 
 ಎಡಗೈ ಸ್ಪಿನ್ನರ್ ಹೆರಾತ್ ಬಳಿಕ ತಮ್ಮ ಸ್ಪಿನ್ ದಾಳಿಯಿಂದ 54ಕ್ಕೆ 5 ವಿಕೆಟ್ ಕಬಳಿಸಿದ್ದರಿಂದ ಆಸ್ಟ್ರೇಲಿಯಾ 161ಕ್ಕೆ ಔಟ್ ಆಗಿತ್ತು.
 
ಇದೊಂದು ಮಹತ್ತರ ಜಯವಾಗಿದ್ದು, ಕುಶಾಲ್ ಮೆಂಡಿಸ್‌ಗೆ ಈ ಗೆಲುವಿನ ಕ್ರೆಡಿಟ್ ಹೋಗುತ್ತದೆ ಎಂದು ಮ್ಯಾಥೀವ್ಸ್ ತಿಳಿಸಿದರು. ವಿಕೆಟ್ ಸ್ಪಿನ್ನರುಗಳಿಗೆ ನೆರವಾಗಿದ್ದು ರಂಗನಾಥ್ ಹೆರಾತ್ ತಮ್ಮ ಬೌಲಿಂಗ್ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ.
 17 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಸಂತಸ ತಂದಿದೆ. ಇದು ಬಲಿಷ್ಠ ಆಸ್ಟ್ರೇಲಿಯಾ ತಂಡವಾಗಿದ್ದು ನಂಬರ್ ಒನ್ ಶ್ರೇಯಾಂಕ ಹೊಂದಿದ್ದಾರೆ. ನಾವು ಕಳೆದ ಬಾರಿ ಆಸೀಸ್ ವಿರುದ್ಧ ಗೆದ್ದಾಗ ನಾನು ಚಿಕ್ಕ ಬಾಲಕನಾಗಿದ್ದೆ ಎಂದು ಮ್ಯಾಥೀವ್ಸ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಮುಂದಿನ ಸುದ್ದಿ
Show comments