Select Your Language

Notifications

webdunia
webdunia
webdunia
webdunia

ಶ್ರೀಲಂಕಾ 17 ವರ್ಷಗಳ ಹಿಂದಿನ ಪಂದ್ಯದಿಂದ ಸ್ಫೂರ್ತಿ ಪಡೆದು ಗೆಲ್ಲುವುದೇ?

ಶ್ರೀಲಂಕಾ 17 ವರ್ಷಗಳ ಹಿಂದಿನ ಪಂದ್ಯದಿಂದ ಸ್ಫೂರ್ತಿ ಪಡೆದು ಗೆಲ್ಲುವುದೇ?
ಕೊಲಂಬೊ , ಮಂಗಳವಾರ, 1 ಸೆಪ್ಟಂಬರ್ 2015 (13:46 IST)
ಶ್ರೀಲಂಕಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ  5 ವಿಕೆಟ್ ಕಳೆದುಕೊಂಡು 183 ರನ್‌ ಗಳಿಸಿದ್ದು, ಭಾರತಕ್ಕೆ ಅಪರೂಪದ ವಿದೇಶಿ ಸರಣಿ ಜಯ ತಪ್ಪಿಸಲು ಇನ್ನೂ 203 ರನ್ ಗಳಿಸಬೇಕಾಗಿದೆ.  ಶ್ರೀಲಂಕಾ ಜಿಂಬಾಬ್ವೆ ವಿರುದ್ಧ 17 ವರ್ಷಗಳ ಹಿಂದೆ ನಡೆದ ಟೆಸ್ಟ್‌ನಲ್ಲಿ ಪ್ರಸಕ್ತ ಪಂದ್ಯಕ್ಕೆ ಹೋಲಿಕೆಯಾಗುವ ಸನ್ನಿವೇಶದಲ್ಲಿ ಶ್ರೀಲಂಕಾ ಪವಾಡ ಮಾಡಿತ್ತು.

 ಆಂಜೆಲೊ ಮ್ಯಾಥೀವ್ಸ್ ತಂಡ ಆ ಜಯದಿಂದ ಸ್ಫೂರ್ತಿ ಪಡೆಯುತ್ತಾರಾ ಕಾದು ನೋಡಬೇಕು. 17 ವರ್ಷಗಳ ಹಿಂದೆ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ  ಶ್ರೀಲಂಕಾಗೆ ಗೆಲ್ಲುವುದಕ್ಕೆ 326 ರನ್ ಗುರಿಯಿತ್ತು. ಅಟಪಟ್ಟು ಮತ್ತು ಮಹಾನಾಮಾ ಶೂನ್ಯಕ್ಕೆ ಔಟಾದರು. ಹೀತ್ ಸ್ಟ್ರೀಕ್ ಮಾರಕ ಬೌಲಿಂಗ್ ದಾಳಿ ಮಾಡಿದ್ದರು. ಜಯಸೂರ್ಯ ಮತ್ತು ತಿಲಕರತ್ನೆ ನಿರ್ಗಮನದ ಬಳಿಕ ಶ್ರೀಲಂಕಾ ಸೋಲಿನ ಸುಳಿಯಲ್ಲಿತ್ತು. ಆದರೆ ಅರವಿಂದ ಡಿಸಿಲ್ವ ಮತ್ತು ರಣತುಂಗ ಮನೋಜ್ಞ ಆಟದಿಂದ ಶ್ರೀಲಂಕಾವನ್ನು ಹಳಿಯ ಮೇಲೆ ತಂದು ಗೆಲ್ಲಿಸಿದರು. 
 
ಪ್ರಸಕ್ತ ಶ್ರೀಲಂಕಾ ತಂಡವು  ಈ ಪಂದ್ಯ ಗೆಲ್ಲುವುದಕ್ಕೆ 17 ವರ್ಷಗಳ ಹಿಂದೆ ಡಿ ಸಿಲ್ವ ಮತ್ತು ರಣತುಂಗಾ ಪ್ರದರ್ಶಿಸಿದ ಕೆಚ್ಚನ್ನು, ಅತ್ಯುತ್ಸಾಹವನ್ನು ಪ್ರದರ್ಶಿಸಬೇಕಾಗಿದೆ. ಆದರೆ ಸಂಗಕ್ಕರ ಮತ್ತು ಜಯವರ್ದನೆ ನಿವೃತ್ತಿಯಿಂದ ಈ ತಂಡ ಬಡವಾಗಿದ್ದು, ಇಡೀ ಹೊರೆ ಈಗ ಮ್ಯಾಥೀವ್ಸ್ ಮೇಲೆ ಬಿದ್ದಿದೆ. 
 

Share this Story:

Follow Webdunia kannada