Webdunia - Bharat's app for daily news and videos

Install App

ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಬೂಮ್ರಾ ಮತ್ತೊಂದು ಮೈಲಿಗಲ್ಲು: ಅಗ್ರಸ್ಥಾನ ಗಟ್ಟಿಮಾಡಿದ ಭಾರತದ ವೇಗಿ

Sampriya
ಬುಧವಾರ, 22 ಜನವರಿ 2025 (16:03 IST)
Photo Courtesy X
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನ ಬಲಪಡಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸಾಗಿದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿತ್ತು. ಆದರೆ ಸರಣಿಯುದ್ದಕ್ಕೂ ಅಮೋಘ ನಿರ್ವಹಣೆ ನೀಡಿದ ಬೂಮ್ರಾ 32 ವಿಕೆಟ್‌ಗಳನ್ನು ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಬೂಮ್ರಾ ಒಟ್ಟು 908 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿದ್ದಾರೆ. ಇದು ಬೂಮ್ರಾ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.

ಬೂಮ್ರಾ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ (841) ಇದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (837) ಮೂರು ಮತ್ತು ಆಸೀಸ್‌ನ ಜೋಶ್ ಹ್ಯಾಜಲ್‌ವುಡ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಜಡೇಜ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ ತಲುಪಿದ್ದಾರೆ.

ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ರವೀಂದ್ರ ಜಡೇಜ ಅಗ್ರಸ್ಥಾನದಲ್ಲಿ (400 ರೇಟಿಂಗ್ ಪಾಯಿಂಟ್ಸ್) ಮುಂದುವರಿದಿದ್ದಾರೆ.

ಬ್ಯಾಟಿಂಗ್ ವಿಭಾಗವನ್ನು ಇಂಗ್ಲೆಂಡ್‌ನ ಜೋ ರೂಟ್ (895) ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್‌ನವರೇ ಆದ ಹ್ಯಾರಿ ಬ್ರೂಕ್ (876) ಎರಡು ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (867) ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಯಶಸ್ವಿ ಜೈಸ್ವಾಲ್ (847) ನಾಲ್ಕನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನದಲ್ಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments