Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಸಹಾಯಕ ಕೋಚ್‌ಗೆ ವಾರ್ಷಿಕ ಒಂದರಿಂದ ಒಂದೂವರೆ ಕೋಟಿ ರೂ.

ಟೀಂ ಇಂಡಿಯಾ ಸಹಾಯಕ ಕೋಚ್‌ಗೆ ವಾರ್ಷಿಕ ಒಂದರಿಂದ ಒಂದೂವರೆ ಕೋಟಿ ರೂ.
ನವದೆಹಲಿ: , ಶುಕ್ರವಾರ, 8 ಜುಲೈ 2016 (20:11 IST)
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವೇಗದ ಬೌಲಿಂಗ್ ಕೋಚ್ ನೇಮಿಸಲು ಬಿಸಿಸಿಐ ಪ್ರಸಕ್ತ ಎದುರುನೋಡುತ್ತಿದೆ. ಆದರೆ ಎರಡನೇ ಸಾಲಿನ ಭಾರತೀಯ ವೇಗಿಗಳಿಗೆ ತರಬೇತಿ ನೀಡಲು ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಬಿಸಿಸಿಐ ವಿಫಲವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಇದಕ್ಕಾಗಿ ಪ್ರತಿ ವರ್ಷ 60 ಲಕ್ಷ ರೂ.ಗಳನ್ನು ನೀಡಲು ತಯಾರಿದೆ.

ಟೀಂ ಇಂಡಿಯಾ ಸಹಾಯಕ ಕೋಚ್‌ಗೆ ಒಂದು ಕೋಟಿಯಿಂದ ಒಂದೂವರೆ ಕೋಟಿಯನ್ನು ವಾರ್ಷಿಕವಾಗಿ ಪಾವತಿ ಮಾಡುವುದನ್ನು ಪರಿಗಣಿಸಿದರೆ, ಎನ್‌ಸಿಎನಲ್ಲಿ ಪ್ರತಿ ವರ್ಷಕ್ಕೆ 60 ಲಕ್ಷ ರೂ. ನೀಡುವುದು ಸಮರ್ಥನೀಯವಲ್ಲ ಎಂದು ಅನೇಕ ಮಂದಿ ಭಾವಿಸಿದ್ದಾರೆ. ಏಕೆಂದರೆ ಎರಡೂ ಹುದ್ದೆಗಳು ಸಮಾನ ಬೇಡಿಕೆಯಿಂದ ಕೂಡಿದೆ.
 
ಭಾರತದ ಬೆಂಬಲ ಸಿಬ್ಬಂದಿಗೆ ಐಪಿಎಲ್ ನಿಯೋಜನೆಗಳನ್ನು ತೆಗೆದುಕೊಳ್ಳಲು ಅವಕಾಶವಿದ್ದರೆ, ಬಿಸಿಸಿಐ ಎನ್‌ಸಿಎ ಕೋಚ್‌ಗೆ ಹಾಗೆ ಮಾಡಲು ಅನುಮತಿಸುವುದಿಲ್ಲ. ಇದಲ್ಲದೇ ಬಿಸಿಸಿಐ ವೇಗದ ಬೌಲಿಂಗ್ ಕೋಚ್‌ ಬೆಂಗಳೂರಿಗೆ ಸ್ಥಳಾಂತರವಾಗಬೇಕೆಂದು ಬಯಸಿದ್ದಾರೆ. ಆದ್ದರಿಂದ ಸೂಕ್ತ ಅಭ್ಯರ್ಥಿಯ ನೇಮಕದಲ್ಲಿ ಸಮಸ್ಯೆ ಉಂಟಾಗಿರುವುದಕ್ಕೆ ಇನ್ನೊಂದು ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಅಭ್ಯಾಸ ಪಂದ್ಯದಲ್ಲಿ ಶಮಿ ಫಿಟ್ನೆಸ್ ಕುರಿತು ಕುಂಬ್ಳೆ ನಿಗಾ