Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಲೀಗ್ ರದ್ದುಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ

ಚಾಂಪಿಯನ್ಸ್ ಲೀಗ್ ರದ್ದುಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ
ನವದೆಹಲಿ , ಸೋಮವಾರ, 25 ಮೇ 2015 (18:36 IST)
ನಾವು ಚಾಂಪಿಯನ್ಸ್ ಲೀಗ್ ಟಿ 20ಯನ್ನು ರದ್ದುಮಾಡಿಲ್ಲ. ಇದು ಮಾಧ್ಯಮದ ಊಹಾಪೋಹವಾಗಿದ್ದು, ಪಂದ್ಯಾವಳಿಯ ಬಗ್ಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ದೇವೆ.  ಕ್ರಿಕೆಟ್ ಹಿತಾಸಕ್ತಿ ದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಸೋಮವಾರ ತಿಳಿಸಿದರು. 
 
ಪ್ರಸಾರಕರು ಮತ್ತು ಅಭಿಮಾನಿಗಳ ಹಿತಾಸಕ್ತಿಗೆ ಅನುಗುಣವಾಗಿ ನಾವು ಮುಂದುವರಿಯುತ್ತೇವೆ. ಅಭಿಮಾನಿಗಳಿಗೆ ಆಸಕ್ತಿ ಇಲ್ಲದಿದ್ದರೆ, ಅದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. 
 
ಸಿಎಲ್‌ಟಿ 20 ವಾರ್ಷಿಕ ಅಂತಾರಾಷ್ಟ್ರೀಯ ಟಿ20 ಸ್ಪರ್ಧೆಯಾಗಿದ್ದು, ಪ್ರಮುಖ ಕ್ರಿಕೆಟ್ ಆಡುವ ರಾಷ್ಟ್ರಗಳಿಗೆ ಸೇರಿದ ಅಗ್ರ ಸ್ಥಳೀಯ ತಂಡಗಳ ನಡುವೆ ಆಡಲಾಗುತ್ತದೆ.
ಸ್ಥಳೀಯ ಟಿ20 ಪಂದ್ಯಾವಳಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯನ್ನು ಮುಂದಿನ ವರ್ಷದ ಐಪಿಎಲ್ ಹರಾಜಿಗೆ ಮೊದಲು ನಡೆಸಲಾಗುತ್ತದೆ. ಇದು ಉದಯೋನ್ಮುಖ ಸ್ಥಳೀಯ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಒದಗಿಸುತ್ತದೆ ಎಂದು ಠಾಕುರ್ ಹೇಳಿದ್ದಾರೆ.

Share this Story:

Follow Webdunia kannada