Webdunia - Bharat's app for daily news and videos

Install App

ಭಾರತದಲ್ಲೇ ಆಡಿ, ಸ್ವದೇಶಿ ಸರಣಿ ನಷ್ಟಕ್ಕೆ ಬಿಸಿಸಿಐ ಪರಿಹಾರ ನೀಡುತ್ತದೆ: ರಾಜೀವ್ ಶುಕ್ಲಾ

Webdunia
ಶನಿವಾರ, 21 ನವೆಂಬರ್ 2015 (17:15 IST)
ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಅವರು ಯುಎಇನಲ್ಲಿ ಸ್ವದೇಶಿ ಸರಣಿಯನ್ನು ಆಡುವ ಬದಲಿಗೆ ಸ್ವದೇಶದಲ್ಲೇ ಸುರಕ್ಷಿತ ಮೈದಾನವನ್ನು ಅಭಿವೃದ್ಧಿಪಡಿಸಲು ಆರಂಭಿಸುವಂತೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಲಹೆ ನೀಡಿದ್ದಾರೆ.  ಐಪಿಎಲ್ ಅಧ್ಯಕ್ಷರೂ ಕೂಡ ಆಗಿರುವ ಶುಕ್ಲಾ ಯುಎಇನಲ್ಲಿ ಆಡುವಂತೆ ಒಪ್ಪಿಸುವ ಬದಲಿಗೆ ಪಾಕಿಸ್ತಾನದಲ್ಲಿ ಸುರಕ್ಷಿತ ತಾಣಗಳನ್ನು ನಿರ್ಮಿಸಬೇಕು.

ಯುಎಇನಲ್ಲಿ ಕ್ರಿಕೆಟ್ ಆಟ ಮುಂದುವರಿಸಿದಲ್ಲಿ ಪಾಕಿಸ್ತಾನ ಕ್ರಿಕೆಟ್ ನಿಧಾನಗತಿಯಲ್ಲಿ ಕಷ್ಟಕ್ಕೆ ಸಿಲುಕುತ್ತದೆ ಎಂದು ಹೇಳಿರುವ ಅವರು ಲಾಹೋರ್ ಮೈದಾನವನ್ನು ಸುರಕ್ಷಿತ ತಾಣವಾಗಿ ನಿರ್ಮಿಸಬಹುದು ಎಂದು ಹೇಳಿದರು.  ಪಿಸಿಬಿ ಲಾಹೋರ್ ಮೈದಾನದ ಬಳಿ ತಂಡದ ಹೊಟೆಲ್ ನಿರ್ಮಾಣ ಮಾಡಿ ಸಾಕಷ್ಟು ಭದ್ರತೆಯನ್ನು ಒದಗಿಸಿದಲ್ಲಿ ಭಾರತಕ್ಕೆ ಲಾಹೋರ್‌ನಲ್ಲಿ ಆಡಲು ಯಾವುದೇ ಆಕ್ಷೇಪವಿಲ್ಲ ಎಂದು ಅವರು ಹೇಳಿದರು.
 
ಬಳಿಕ ಶುಕ್ಲಾ ಸ್ಪಷ್ಟೀಕರಣ ನೀಡುತ್ತಾ, ಪಾಕಿಸ್ತಾನ ಐಸಿಸಿಗೆ ಸಾಕಷ್ಟು ಭದ್ರತಾ ಭರವಸೆಗಳನ್ನು ನೀಡಿದರೆ ಮತ್ತು ಇತರೆ ಮಂಡಳಿಗಳಿಗೆ ಕೂಡ ಅಲ್ಲಿ ಆಡಲು ಯಾವುದೇ ಆಕ್ಷೇಪವಿಲ್ಲದಿದ್ದರೆ ಪ್ರತಿಯೊಂದು ತಂಡವೂ ಅಲ್ಲಿಗೆ ಆಡಲು ಬರುತ್ತದೆ ಎಂದು ಹೇಳಿದರು. 
 
ಎರಡು ಮಂಡಳಿಗಳ ನಡುವೆ ಕಳೆದ ವರ್ಷ ಸಹಿ ಹಾಕಲಾದ ಒಡಂಬಡಿಕೆ ಕುರಿತು ನೆನಪಿಸಿದಾಗ, ಐಸಿಸಿ ಮತ್ತು ಬಿಸಿಸಿಐಗೆ ಬೇರೆಯವರು ಮುಖ್ಯಸ್ಥರಾಗಿದ್ದಾಗ ಅದಕ್ಕೆ ಸಹಿ ಹಾಕಲಾಗಿತ್ತು. ಈಗ ನಮ್ಮ ಪ್ರಸಕ್ತ ಅಧ್ಯಕ್ಷರು ಪಾಕಿಸ್ತಾನ ಮತ್ತು ಭಾರತ ಪರಸ್ಪರರ ರಾಷ್ಟ್ರಗಳಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಬಾರಿ ಭಾರತಕ್ಕೆ ಬಂದು ಆಡಿ. ಸ್ವದೇಶಿ ಸರಣಿಯ ನಷ್ಟಕ್ಕೆ ನಾವು ಪರಿಹಾರ ನೀಡಲು ಸಿದ್ಧರಿದ್ದೇವೆ, ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಣೆಯಾದರೆ  ನಾವು ಅಲ್ಲಿಗೆ ತೆರಳಿ ಒಂದೆರಡು ಸರಣಿ ಆಡುತ್ತೇವೆ. ಅದನ್ನು ಅಹಂ ವಿಷಯವಾಗಿ ತೆಗೆದುಕೊಂಡು ದುಬೈನಲ್ಲೇ ಆಡಬೇಕೆಂದು ಒತ್ತಾಯಿಸುವುದು ಏಕೆ ಎಂದು ಪ್ರಶ್ನಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments