Webdunia - Bharat's app for daily news and videos

Install App

ವಿಮೆ ಪಾಲಿಸಿಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಿರುವ ಬಿಸಿಸಿಐ

Webdunia
ಗುರುವಾರ, 28 ಮೇ 2015 (17:47 IST)
ಬಿಸಿಸಿಐ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದಂತೆ, ಪಂದ್ಯದ ಅಧಿಕಾರಿಗಳು, ಅಂತಾರಾಷ್ಟ್ರೀಯ ಪಂದ್ಯಗಳು, ದೇಶೀಯ ಪಂದ್ಯಾವಳಿಗಳು ಮತ್ತು ಅದರ ನೌಕರರ ಯೋಗಕ್ಷೇಮವನ್ನು ಏಕಕಾಲದಲ್ಲಿ ನೋಡಿಕೊಳ್ಳುತ್ತದೆ. ಬಿಸಿಸಿಐ ಪ್ರತಿವರ್ಷ ತೆಗೆದುಕೊಳ್ಳುವ ವಿಮಾಪಾಲಿಸಿಗಳಲ್ಲಿ ಇದು ಬಿಂಬಿತವಾಗಿದೆ.
 
 ಈ ಪಾಲಿಸಿಗಳ ಮೇಲೆ ಅದು ಖರ್ಚು ಮಾಡುವ ಹಣದ ಮೊತ್ತ ಕೂಡ ಬೃಹತ್ತಾಗಿದೆ. ಜುಲೈ 2013 ಮತ್ತು ಏಪ್ರಿಲ್ 2015ರ ನಡುವೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ  3392.98 ಕೋಟಿ ರೂ. ಮೌಲ್ಯದ ವಿಮಾ ಪಾಲಿಸಿಗಳನ್ನು ಖರೀದಿಸಿದ್ದು, ಅದಕ್ಕಾಗಿ 11.68 ಕೋಟಿ ರೂ. ಪ್ರೀಮಿಯಂ ಕಟ್ಟಿದೆ.  

ಬಿಸಿಸಿಐ ವಿಮಾ ಪಾಲಿಸಿಗಳು ಎಲ್ಲವನ್ನೂ ಒಳಗೊಂಡಿದ್ದು, ವೈಯಕ್ತಿಕ ವಿಮಾ ಪಾಲಿಸಿ, ಮಂಡಳಿಯ ನೌಕರರಿಗೆ ಮೆಡಿ ಕ್ಲೇಮ್ ಪಾಲಿಸಿ, ವಿವಿಧ ಕಾರಣಗಳಿಗೆ ಆಟಗಾರರ ಶುಲ್ಕ ನಷ್ಟ ಎಲ್ಲವನ್ನೂ ಒಳಗೊಂಡಿದೆ. ದೇಶೀಯ ಮತ್ತು ವಿದೇಶಿ ಆಟಗಾರರು ಈ ವಿಮಾ ವ್ಯಾಪ್ತಿಗೆ ಬರುತ್ತಾರೆ. 
 
 ಬಿಸಿಸಿಐ ಚಟುವಟಿಕೆಗಳ ಹೆಚ್ಚಳದೊಂದಿಗೆ ಕಾಲಾಂತರದಲ್ಲಿ ವಿಮೆ ಮೇಲೆ ಖರ್ಚು ಮಾಡಿದ ಹಣದ ಮೊತ್ತ ಏರಿಕೆಯಾಗಿದೆ.  ಇಂದು ವಿಮೆ ರಕ್ಷಣೆ ದೂರದವರೆಗೆ ವ್ಯಾಪಿಸಿದ್ದು, ಅದರ ನಿರ್ವಹಣೆಗಳು ಸುಗಮವಾಗಿರಲು ಬಿಸಿಸಿಐ ಬೆಲೆ ತೆರಬೇಕಾಗಿದೆ. ಮಂಡಳಿ ತೆಗೆದುಕೊಂಡಿರುವ ವಿವಿಧ ವಿಮಾ ಪಾಲಿಸಿಗಳಲ್ಲಿ, ಆದಾಯ ರಕ್ಷಣೆ ಮೇಲುಗೈ ಪಡೆದಿದೆ.  ಇತ್ತೀಚಿನ ಆದಾಯ ರಕ್ಷಣೆ 2041 ಕೋಟಿ ಮೌಲ್ಯವುಳ್ಳದ್ದಾಗಿದ್ದು, ಇದಕ್ಕಾಗಿ ಮಂಡಳಿಯು 7.38 ಕೋಟಿ ರೂ. ಪ್ರೀಮಿಯಂ ಪಾವತಿ ಮಾಡಿದೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments