Select Your Language

Notifications

webdunia
webdunia
webdunia
webdunia

ಎರಡು ಹೊಸ ಐಪಿಎಲ್ ತಂಡಗಳಿಗೆ ಬಿಸಿಸಿಐ ಟೆಂಡರ್ ಸಂಭವ

ಎರಡು ಹೊಸ ಐಪಿಎಲ್ ತಂಡಗಳಿಗೆ ಬಿಸಿಸಿಐ ಟೆಂಡರ್ ಸಂಭವ
ಮುಂಬೈ , ಸೋಮವಾರ, 10 ಆಗಸ್ಟ್ 2015 (15:48 IST)
ಐಪಿಎಲ್ ಮುಂದಿನ ಆವೃತ್ತಿಗಾಗಿ ಫ್ರಾಂಚೈಸಿ ಮಾಲೀಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಶೀಘ್ರದಲ್ಲೇ ಎರಡು ಹೊಸ ತಂಡಗಳ ಆಯ್ಕೆಗೆ ಟೆಂಡರ್ ಕರೆಯಲಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ತಂಡಗಳ ಸಂಖ್ಯೆಯನ್ನು 8ಕ್ಕಿಂತ ಕಡಿಮೆ ಇಳಿಸುವ ಸಂಭವ ಇಲ್ಲ ಎಂದು ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಮಗೆ ಆರು ವಾರಗಳ ಕಾಲಾವಕಾಶ ನಿಗದಿಮಾಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಅನೇಕ ಸಭೆಗಳನ್ನು ನಾವು ನಡೆಸಬೇಕಿದೆ. ನಾವು ಆರುವಾರಗಳಲ್ಲಿ ಈ ಕಾರ್ಯವನ್ನು ಮುಗಿಸುತ್ತೇವೆಂಬ ವಿಶ್ವಾಸವಿದೆ ಎಂದು ಬಿಸಿಸಿಐ ಅನುರಾಗ್ ಠಾಕುರ್ ದೃಢಪಡಿಸಿದ್ದಾರೆ. 

ಈ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೊಸ ತಂಡಗಳಿಗೆ ಬಿಡ್ಡರ್‌ಗಳ ಆಹ್ವಾನಕ್ಕೆ ಟೆಂಡರ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹತ್ತಿರದ ಮೂಲವೊಂದು ಹೇಳಿದೆ. ಕಾರ್ಯಕಾರಿ ಸಮಿತಿಯು 6 ವಾರಗಳ ಕಾಲಾವಧಿಯಲ್ಲಿ ತನ್ನ ವರದಿಯನ್ನು ನೀಡುವ ಸಾಧ್ಯತೆಯಿದ್ದು, ಅದಕ್ಕಿಂತ ಮುಂಚಿತವಾಗಿ ಪರಿಹಾರ ಕಂಡುಹಿಡಿಯಲಾಗುತ್ತದೆ.
 
ಕಾರ್ಯಕಾರಿ ಸಮಿತಿಯು ಎಲ್ಲಾ ಸಾಧಕಬಾಧಕಗಳನ್ನು ನೋಡುತ್ತಿದ್ದು, ನಿಷೇಧಿಸಲಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಗತಿ ಏನಾಗುತ್ತದೆಂದು ಆತುರಾತುರವಾಗಿ ನಿರ್ಧರಿಸಲಾಗುವುದಿಲ್ಲ.  ಎರಡು ತಂಡಗಳನ್ನು ರದ್ದು ಮಾಡುವುದು ಕಷ್ಟವಾಗಬಹುದು. ಲೋಧಾ ಸಮಿತಿ ಅಮಾನತು ಮಾಡಿರುವ ಎರಡು ತಂಡಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಬಿಸಿಸಿಐ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತದೆ.

ಕೊಚ್ಚಿ ಟಸ್ಕರ್ ತಂಡವನ್ನು ಪುನಃ ಕಣಕ್ಕಿಳಿಸಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಮುಂದಿನ ಒಂದೆರಡು ವಾರಗಳಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ನಾವು ಪಾರದರ್ಶಕತೆಗೆ ಒತ್ತುನೀಡುತ್ತೇವೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
 

Share this Story:

Follow Webdunia kannada