Select Your Language

Notifications

webdunia
webdunia
webdunia
webdunia

ಬಾಂಗ್ಲಾದೇಶಕ್ಕೆ ಪಾಕ್ ವಿರುದ್ಧ ಐತಿಹಾಸಿಕ ಟ್ವೆಂಟಿ20 ಜಯ

ಬಾಂಗ್ಲಾದೇಶಕ್ಕೆ ಪಾಕ್ ವಿರುದ್ಧ  ಐತಿಹಾಸಿಕ ಟ್ವೆಂಟಿ20 ಜಯ
ಢಾಕಾ , ಶನಿವಾರ, 25 ಏಪ್ರಿಲ್ 2015 (15:53 IST)
ಬಾಂಗ್ಲಾದೇಶದ ಶೋಚನೀಯ ಪ್ರವಾಸವನ್ನು ಪಾಕಿಸ್ತಾನ ಮುಂದುವರಿಸಿದ್ದು, ಆತಿಥೇಯ ಬಾಂಗ್ಲಾ ಪ್ರಥಮ ಟಿ20 ಜಯವನ್ನು ಪಾಕ್ ವಿರುದ್ಧ ದಾಖಲಿಸಿದೆ.  ಬಾಂಗ್ಲಾ ವಿರುದ್ಧ ಏಕದಿನ ಸರಣಿಯನ್ನು 0-3ರಿಂದ ವಾಶ್ ಔಟ್ ಆಗಿದ್ದ ಪಾಕಿಸ್ತಾನ ಮತ್ತೆ ತನ್ನ ಸೋಲಿನ ಸರಣಿಯನ್ನು ಮುಂದುವರಿಸಿದೆ.

 ಚೊಚ್ಚಲ ವೇಗಿ ಮುಸ್ತಾಫಿಜುರ್ ರೆಹಮಾನ್ ನಾಲ್ಕು ಓವರುಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಬಳಿಸಿದರು. ಟಾಸ್ ಗೆದ್ದ ನಂತರ ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನವನ್ನು ಬಾಂಗ್ಲಾ ಬೌಲರುಗಳು ಕೇವಲ 5 ವಿಕೆಟ್‌ಗೆ 141 ರನ್‍‌ಗೆ ನಿರ್ಬಂಧಿಸಿದರು. 
 
ನಂತರ ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಮತ್ತು ಸಬೀರ್ ರೆಹ್ಮಾನ್ ಅಜೇಯ ಅರ್ಧಶತಕಗಳನ್ನು ಬಾರಿಸಿ 17ನೇ ಓವರಿನಲ್ಲೇ ಪಾಕ್ ಗುರಿಯನ್ನು ಮುಟ್ಟಿದರು. ಶಕೀಬ್ 41 ಎಸೆತಗಳಲ್ಲಿ ಅಜೇಯ 57 ರನ್ ಮತ್ತು ಸಬ್ಬೀರ್ ಅಜೇಯ 51 ರನ್ ನೆರವಿನೊಂದಿಗೆ ನಾಲ್ಕನೇ ವಿಕೆಟ್‌ಗೆ 105 ರನ್ ಕಲೆಹಾಕುವ ಮೂಲಕ ಬಾಂಗ್ಲಾಗೆ ಗೆಲುವನ್ನು ತಂದಿತ್ತರು.  6ನೇ ಓವರಿನಲ್ಲಿ 3 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿದ್ದ ಬಾಂಗ್ಲಾ ಒಂದು ಹಂತದಲ್ಲಿ  3 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. 
 
ಬಾಂಗ್ಲಾ ಪರ 19 ವರ್ಷದ ಎಡಗೈ ಬೌಲರ್ ನಾಯಕ ಶಾಹಿದ್ ಅಫ್ರಿದಿ ಮತ್ತು ಮಹಮ್ಮದ್ ಹಫೀಜ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಪಾಕಿಸ್ತಾನದ ಚೊಚ್ಚಲ ಆಟಗಾರ ಮುಕ್ತರ್ ಅಹ್ಮದ್ 30 ಎಸೆತಗಳಲ್ಲಿ 37 ಮತ್ತು ಎಡಗೈ ಆಟಗಾರ ಹ್ಯಾರಿಸ್ ಸೊಹೇಲ್ ಅಜೇಯ 30 ರನ್ ಹೊಡೆದರೂ ಬಾಂಗ್ಲಾ ಬೌಲಿಂಗ್ ಆಡಲು ಪಾಕ್ ಆಟಗಾರರು ತಿಣುಕಾಡಿದರು. 

Share this Story:

Follow Webdunia kannada