Select Your Language

Notifications

webdunia
webdunia
webdunia
webdunia

16 ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಾಂಗ್ಲಾದೇಶ

16 ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ  ಪಾಕಿಸ್ತಾನವನ್ನು  ಸೋಲಿಸಿದ ಬಾಂಗ್ಲಾದೇಶ
ಮಿರ್‌ಪುರ್ , ಶನಿವಾರ, 18 ಏಪ್ರಿಲ್ 2015 (11:05 IST)
ಢಾಕಾದಲ್ಲಿ ಪ್ರಥಮ ಅಂತಾರಾಷ್ಟ್ರೀಯ ಏಕ ದಿನ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸುವ ಮೂಲಕ 16 ವರ್ಷಗಳ ನಂತರ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಸಾಧನೆ ಮಾಡಿದೆ.

ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯರು 6 ವಿಕೆಟ್ ಕಳೆದುಕೊಂಡು 329 ರನ್ ಗಳಿಸಿತ್ತು. ನಂತರ ಎದುರಾಳಿ ತಂಡವನ್ನು 45.2 ಓವರುಗಳಲ್ಲಿ ಬೌಲ್ಡ್ ಔಟ್ ಮಾಡಿತು.

 ಟೆಸ್ಟ್ , ಏಕದಿನ ಪಂದ್ಯಗಳು ಮತ್ತು ಟ್ವೆಂಟಿ 20 ಮಾದರಿ ಆಟಗಳು ಸೇರಿದಂತೆ 48 ಪಂದ್ಯಗಳಲ್ಲಿ ಬಾಂಗ್ಲಾದೇಶಕ್ಕೆ ಇದು 2ನೇ ಜಯವಾಗಿದೆ.  ಎರಡನೇ ಪಂದ್ಯವನ್ನು ಭಾನುವಾರ ಇದೇ ಸ್ಥಳದಲ್ಲಿ ಆಡಲಾಗುತ್ತದೆ. 
 

Share this Story:

Follow Webdunia kannada