Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ವಿರುದ್ಧ ಸೋತ ಬಾಂಗ್ಲಾ ವಾಷ್ ಔಟ್

ನ್ಯೂಜಿಲೆಂಡ್ ವಿರುದ್ಧ ಸೋತ ಬಾಂಗ್ಲಾ ವಾಷ್ ಔಟ್
ಕೋಲ್ಕತಾ: , ಶನಿವಾರ, 26 ಮಾರ್ಚ್ 2016 (23:38 IST)
ಭಾರತದ ವಿರುದ್ಧ ಗೆಲುವಿನ ಸಮೀಪ ಬಂದಿದ್ದ ಬಾಂಗ್ಲಾದೇಶ ನ್ಯೂಜಿಲೆಂಡ್ ವಿರುದ್ಧ ಕೇವಲ 70 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋತು ವಾಷ್ ಔಟ್ ಆಗಿದೆ. ನ್ಯೂಜಿಲೆಂಡ್ ಮೊದಲಿಗೆ ಬ್ಯಾಟಿಂಗ್ ಮಾಡಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತು. ಕೇನ್ ವಿಲಿಯಂಸನ್ ಅವರ ಬಿರುಸಿನ 32 ಎಸೆತಗಳಿಗೆ 42 ರನ್ ಮತ್ತು ಕಾಲಿನ್ ಮನ್ರೋ 35 ಮತ್ತು ರೋಸ್ ಟೈಲರ್ ಅವರ 28 ರನ್ ನೆರವಿನಿಂದ ಇದು ಸಾಧ್ಯವಾಯಿತು.

ಮುಸ್ತಫಿಜುರ್ ರೆಹಮಾನ್ ಮನೋಜ್ಞ ಬೌಲಿಂಗ್ ಪ್ರದರ್ಶನ ನೀಡಿ 5 ವಿಕೆಟ್ ಕಬಳಿಸಿದರು. ಬಾಂಗ್ಲಾದೇಶದ ನಿರೀಕ್ಷೆಯಂತೆ ಉತ್ತಮವಾಗಿ ಆಡದೇ ನ್ಯೂಜಿಲೆಂಡ್ ಸ್ಪಿನ್ ದಾಳಿಗೆ ತತ್ತರಿಸಿ ಬೇಗನೇ ವಿಕೆಟ್ ಕಳೆದುಕೊಂಡಿತು.

ಬಾಂಗ್ಲಾದ ಯಾವ ಆಟಗಾರನೂ 20 ರನ್ ಗಡಿದಾಟದೇ ಕೇವಲ 70 ರನ್‌ಗೆ ಆಲೌಟ್ ಆಗುವ ಮೂಲಕ ವಾಟ್ ಔಟ್ ಆದರು. ಗ್ರಾಂಟ್ ಎಲಿಯಟ್ ಮತ್ತು ಇಷ್ ಸೋಧಿ ತಲಾ 3 ವಿಕೆಟ್ ಗಳಿಸಿದರು. 

Share this Story:

Follow Webdunia kannada