Select Your Language

Notifications

webdunia
webdunia
webdunia
webdunia

ಬೃಹತ್ ಸ್ಕೋರ್ ಚೇಸ್ ಮಾಡಿದ ಬಾಂಗ್ಲಾಗೆ 6 ವಿಕೆಟ್ ಜಯ

ಬೃಹತ್ ಸ್ಕೋರ್ ಚೇಸ್ ಮಾಡಿದ ಬಾಂಗ್ಲಾಗೆ 6 ವಿಕೆಟ್ ಜಯ
ನೆಲ್ಸನ್ , ಗುರುವಾರ, 5 ಮಾರ್ಚ್ 2015 (12:01 IST)
ಸ್ಕಾಟ್‌ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ನೆಲ್ಸನ್ ಸಾಕ್ಸನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್‌ಲೆಂಡ್‌ನ 318 ರನ್ ಬೆನ್ನತ್ತಿದ್ದ ಬಾಂಗ್ಲಾದೇಶ 48.1 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 322 ರನ್ ಗಳಿಸುವ ಮೂಲಕ ಭರ್ಜರಿ ಜಯ ಗಳಿಸಿದೆ. ಬಾಂಗ್ಲಾದೇಶ ಪರ ತಮೀಮ್ ಮತ್ತು ಶಕೀಬ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸ್ಕಾಟ್ಲೆಂಡ್ ಬೃಹತ್ ಸ್ಕೋರನ್ನು ಚೇಸ್ ಮಾಡುವಲ್ಲಿ ಯಶಸ್ವಿಯಾಯಿತು.

ಬಾಂಗ್ಲಾದೇಶದ ಪರ ತಮೀಮ್ ಇಕ್ಬಾಲ್ 100 ರನ್‌ಗಳಿಗೆ 95 ರನ್ ಸಿಡಿಸಿದರು. ಅವರ ಸ್ಕೋರಿನಲ್ಲಿ  9 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಉಳಿದಂತೆ ಮಹಮದುಲ್ಲಾ 62 ಎಸೆತಗಳಲ್ಲಿ 62 ರನ್ ಮತ್ತು ಮುಸ್ಫೀಕರ್ ರಹೀಮ್ 42 ಎಸೆತಗಳಲ್ಲಿ 60 ರನ್ ಹಾಗೂ ಶಕೀಬ್ ಅಲ್ ಹಸನ್ 41 ಎಸೆತಗಳಲ್ಲಿ ಅಜೇಯ  52 ರನ್ ಮತ್ತು ಸಬೀರ್ ರಹಮಾನ್ 40 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿ ಇನ್ನೂ 6 ವಿಕೆಟ್‌ಗಳು ಇರುವಂತೆಯೇ ಬಾಂಗ್ಲಾ ದೇಶವನ್ನು ಗಡಿ ದಾಟಿಸಿದರು.

ಸ್ಕಾಟ್ಲೆಂಡ್ ಬೌಲಿಂಗ್ ದಾಳಿ ಅಷ್ಟೊಂದು ಮೊನಚಾಗಿಲ್ಲದಿರುವುದರಿಂದ ಬಾಂಗ್ಲಾ ದೇಶಕ್ಕೆ ಬೃಹತ್ ಸ್ಕೋರ್ ಚೇಸ್ ಮಾಡುವುದು ಸುಲಭವಾಯಿತು. ಸ್ಕಾಟ್ಲೆಂಡ್ ಪರ ಜೋಸ್ ಡೇವಿ  2 ವಿಕೆಟ್ ಕಬಳಿಸಿದರು.  ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಸ್ಕಾಟ್ಲೆಂಡ್ ಪರ ಕೈಲ್ ಕೊಯಿಟ್‌ಜರ್  134 ಎಸೆತಗಳಲ್ಲಿ 156 ರನ್ ಸಿಡಿಸಿ ಏಕಾಂಗಿ ಹೋರಾಟ ಮಾಡಿದರು.

ಅವರ ಸ್ಕೋರಿನಲ್ಲಿ 17ಬೌಂಡರಿ ಮತ್ತು ಆರು ಸಿಕ್ಸರುಗಳಿದ್ದವು. ಅವರು ನಸೀರ್ ಹೊಸೇನ್ ಎಸೆತದಲ್ಲಿ ಸೌಮ್ಯ ಸರ್ಕಾರ್‌ಗೆ ಕ್ಯಾಚಿತ್ತು ಔಟಾದರು. ಮ್ಯಾಟ್ ಮ್ಯಾಚನ್ 35 ರನ್, ಮಾಮ್ಸನ್ 39 ರನ್ ಗಳಿಸಿ 318 ರನ್ ಬೃಹತ್ ಮೊತ್ತದ ಸವಾಲನ್ನು ಸ್ಕಾಟ್ಲೆಂಡ್ ಒಡ್ಡಿತ್ತು. ಕೊಯಿಟ್‌ಜರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.  ಬಾಂಗ್ಲಾ ಪರ ತಸ್ಕಿನ್ ಅಹ್ಮದ್ 3 ವಿಕೆಟ್ ಕಬಳಿಸಿದರು.

Share this Story:

Follow Webdunia kannada