Select Your Language

Notifications

webdunia
webdunia
webdunia
webdunia

ಪಾಕ್ ಏಕದಿನ ತಂಡದ ನಾಯಕರಾಗಿ ಅಜಹರ್ ಅಲಿ ಆಯ್ಕೆ

ಪಾಕ್ ಏಕದಿನ ತಂಡದ ನಾಯಕರಾಗಿ ಅಜಹರ್ ಅಲಿ ಆಯ್ಕೆ
ಕರಾಚಿ , ಮಂಗಳವಾರ, 31 ಮಾರ್ಚ್ 2015 (15:37 IST)
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿ ಅಜಹರ್ ಅಲಿ ಮತ್ತು ಉಪನಾಯಕರಾಗಿ ಸರ್ಫರಾಜ್ ಅಹ್ಮದ್ ಅವರನ್ನು ಏಕದಿನ ತಂಡಕ್ಕೆ ನೇಮಕ ಮಾಡಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಶಾಹ್ರಯಾರ್ ಖಾನ್ ಆದೇಶ ಹೊರಡಿಸಿದ್ದಾರೆ.

ಅಜಹರ್ ಅಲಿ, 14 ಏಕದಿನ ಪಂದ್ಯಗಳಲ್ಲಿ ಆಡಿದ್ದು ಸರಾಸರಿ 41.09ರಂತೆ 452 ರನ್‌ ಕಲೆಹಾಕಿದ್ದಾರೆ. ತಂಡದ ಮತ್ತೊಬ್ಬ ಹಿರಿಯ ಆಟಗಾರ ಮಿಸ್ಬಾ ಉಲ್ ಹಕ್ ಟೆಸ್ಟ್ ಪಂದ್ಯಾವಳಿಗಳಿಗೆ ತಂಡದ ನಾಯಕರಾಗಿರುತ್ತಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾನ್, ಕಳೆದ ಶನಿವಾರದಂದು ನಡೆದ ಉನ್ನತ ಮಟ್ಟದ ಸಬೆಯಲ್ಲಿ ಮುಂದಿನ ನಾಯಕ ಯಾರು ಎನ್ನುವ ಬಗ್ಗೆ ಚರ್ಚಿಸಲಾಯಿತು. ಚರ್ಚೆಯಲ್ಲಿ ಸರ್ಫರಾಜ್ ಅಹ್ಮದ್, ಅಜಹರ್ ಅಲಿ, ಮೊಹಮ್ಮದ್ ಹಫೀಜ್ ಮತ್ತು ವಹಾಬ್ ರಿಯಾಜ್ ಅವರ ಹೆಸರುಗಳು ನಾಯಕ ಸ್ಥಾನದ ಸ್ಪರ್ಧೆಯಲ್ಲಿದ್ದವು ಎಂದು ತಿಳಿಸಿದ್ದಾರೆ.

ಮಾಜಿ ಆಟಗಾರರು, ಆಯ್ಕೆ ಸಮಿತಿ ಸದಸ್ಯರು ಮತ್ತು ಕೋಚ್ ವಕಾರ್ ಯುನೂಸ್ ಹಾಗೂ ಹಿರಿಯ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಅವರ ಅಭಿಪ್ರಾಯಗಳಿಂದಾಗಿ ಅಜಹರ್ ಅಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ವಿವರಿಸಿದ್ದಾರೆ.

ಅಜಹರ್ ಅಲಿ ಕಳೆದ ಕೆಲ ವರ್ಷಗಳಿಂದ ಏಕದಿನ ತಂಡದಲ್ಲಿ ಸ್ಥಾನ ಪಡೆಯದಿರಬಹುದು. ಆದರೆ, ಇತ್ತೀಚೆಗೆ ನಡೆದ ಪೆಂಟಾಂಗುಲರ್ ಕಪ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ  ಶಾಹ್ರಯಾರ್ ಖಾನ್ ಹೇಳಿದ್ದಾರೆ.

Share this Story:

Follow Webdunia kannada