Select Your Language

Notifications

webdunia
webdunia
webdunia
webdunia

ಆಸಿಸ್ 310 ರನ್, ಭಾರತದ ವಿರುದ್ಧ 5 ವಿಕೆಟ್ ಗೆಲುವು

ಆಸಿಸ್ 310 ರನ್, ಭಾರತದ ವಿರುದ್ಧ 5 ವಿಕೆಟ್ ಗೆಲುವು
ಪರ್ತ್ , ಮಂಗಳವಾರ, 12 ಜನವರಿ 2016 (16:49 IST)
ಮಹೇಂದ್ರ ಸಿಂಗ್ ಧೋನಿ ಪಡೆ ಆಸ್ಟ್ರೇಲಿಯಾದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲೇ ಮುಗ್ಗರಿಸಿದೆ. ಆಸಿಸ್ 49.2 ಓವರುಗಳಲ್ಲಿ 310 ರನ್ ಗಳಿಸುವ ಮೂಲಕ ಭಾರತದ ವಿರುದ್ಧ 5 ವಿಕೆಟ್ ಗೆಲುವು ಗಳಿಸಿತು. ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 309 ಬೃಹತ್ ಮೊತ್ತವನ್ನು ಗಳಿಸಿತ್ತು. ರೋಹಿತ್ ಶರ್ಮಾ ಅವರು ಅಜೇಯ 171 ರನ್ ಭರ್ಜರಿ ಸ್ಕೋರ್ ಗಳಿಸಿದ್ದರು.

ಆದರೆ ವೇಗದ ಬೌಲಿಂಗ್ ಪಿಚ್‌ನಲ್ಲಿ ಭಾರತದ ಸ್ಪಿನ್ನರುಗಳ ಕೈಚಳಕ ನಡೆಯಲಿಲ್ಲ. ಇದಲ್ಲದೇ ಭಾರತದ ವೇಗದ ಬೌಲಿಂಗ್ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ.  ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರೆ ಬರಿಂದರ್ ಸ್ರಾನ್ 3 ವಿಕೆಟ್ ಕಬಳಿಸಿದರು.

 ಆದರೆ ಸ್ಟೀವನ್ ಸ್ಮಿತ್ ಮತ್ತು ಜಾರ್ಜ್ ಬೈಲಿ ಅವರ ಮಧ್ಯೆ 242 ರನ್ ಉತ್ತಮ ಜತೆಯಾಟವು ಆಸ್ಟ್ರೇಲಿಯಾ ಗೆಲುವಿಗೆ ನೆರವಾಯಿತು. ಸ್ಟೀವ್ ಸ್ಮಿತ್ ಅವರು 149 ರನ್ ಬಾರಿಸಿದ್ದು, ಅವರ ಸ್ಕೋರಿನಲ್ಲಿ 11 ಶತಕ ಮತ್ತು 2 ಸಿಕ್ಸರ್‌ಗ8ಳಿದ್ದವು.  ಜಾರ್ಜ್ ಬೈಲಿ ಅವರ 112 ರನ್ ಸ್ಕೋರಿನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. 

Share this Story:

Follow Webdunia kannada