Webdunia - Bharat's app for daily news and videos

Install App

ಅಭ್ಯಾಸದ ಶಿಬಿರವನ್ನು ತಪ್ಪಿಸಿಕೊಂಡ ಧೋನಿ ಇಂದು ಆಡುವುದು ಅನುಮಾನ

Webdunia
ಬುಧವಾರ, 24 ಫೆಬ್ರವರಿ 2016 (11:51 IST)
ಬಾಂಗ್ಲಾದೇಶದ ವಿರುದ್ಧ ಬುಧವಾರ ಏಷ್ಯಾ ಕಪ್ ಆರಂಭಿಕ ಪಂದ್ಯದಲ್ಲಿ ಧೋನಿ ಆಡುವ ಬಗ್ಗೆ ಅನಿಶ್ಚಿತತೆ ನೆಲೆಸಿದೆ. ಧೋನಿ ಮೈದಾನಕ್ಕೆ ತಂಡದ ಜತೆಗೂಡಿದ್ದರೂ ಸಂಪೂರ್ಣ ಅಭ್ಯಾಸದ ಶಿಬಿರದಿಂದ ತಪ್ಪಿಸಿಕೊಂಡಿದ್ದರು. ಬೆನ್ನಿನ ಸ್ನಾಯು ಸೆಳೆತತಕ್ಕೆ ಚಿಕಿತ್ಸೆ ಪಡೆಯುತ್ತಿರುವ ಧೋನಿ  ಮಿರ್‌ಪುರ ಪಂದ್ಯದಲ್ಲಿ ಲಭ್ಯತೆ ಕುರಿತು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಉಪನಾಯಕ ಕೊಹ್ಲಿ ಕೂಡ ಸ್ಪಷ್ಟ ಪ್ರತಿಕ್ರಿಯೆ ನೀಡದೇ ನುಣುಚಿಕೊಂಡರು.

 
ಪಂದ್ಯ ಪೂರ್ವ ದಿನಗಳಲ್ಲಿ ಅನೇಕ ಆಟಗಾರರು ಅಭ್ಯಾಸ ಮಾಡದಿದ್ದರೂ, ಧೋನಿ ಸಾಮಾನ್ಯವಾಗಿ ಫುಟ್ಬಾಲ್ ಆಡಿ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಧೋನಿ ಅಭ್ಯಾಸದ ಸೆಷನ್‌ನಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡದಿದ್ದರೂ ಮೈದಾನಕ್ಕೆ ತೆರಳುವ ಮುಂಚೆ ಸ್ವಲ್ಪ ವ್ಯಾಯಾಮ ಮಾಡುತ್ತಿದ್ದರು.
 
 ಟಾಸ್‌ಗೆ ಮುನ್ನ 11 ಆಟಗಾರರ ತಂಡವನ್ನು ಪ್ರಕಟಿಸುವ ತನಕ ಧೋನಿ ಆಯ್ಕೆಯನ್ನು ತಳ್ಳಿಹಾಕುವಂತಿಲ್ಲ. ಧೋನಿ ಬೆನ್ನು ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಅವರಿಗೆ ಬದಲಿಯಾಗಿ ಪಾರ್ಥಿವ್ ಪಟೇಲ್ ಅವರಿಗೆ ಕರೆಕಳುಹಿಸಲಾಗಿದೆ. ಧೋನಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳದಿದ್ದರೂ, ಅವರ ತಂಡದ ಆಟಗಾರರು ಖಾನ್ ಸಾಹೇಬ್ ಒಸ್ಮಾನ್ ಅಲಿ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುವುದನ್ನು ವೀಕ್ಷಿಸಿದರು.
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments