Webdunia - Bharat's app for daily news and videos

Install App

ಆರ್ ಸಿಬಿಗೆ ಚಿಯರ್ ಅಪ್ ಮಾಡಲು ವಿರಾಟ್ ಕೊಹ್ಲಿ ಜೊತೆ ಬೆಂಗಳೂರಿಗೆ ಬಂದ ಅನುಷ್ಕಾ ಶರ್ಮಾ

Krishnaveni K
ಶುಕ್ರವಾರ, 3 ಮೇ 2024 (12:40 IST)
ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧ ನಾಳೆ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ಆರ್ ಸಿಬಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಬೆಂಗಳೂರಿಗೆ ಬಂದಿದ್ದಾರೆ.

ಪುತ್ರ ಅಕಾಯ್ ಜನಿಸಿದ ಮೇಲೆ ಅನುಷ್ಕಾ ಶರ್ಮಾ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ಲಂಡನ್ ನಲ್ಲಿಯೇ ಅವರ ಹೆರಿಗೆಯಾಗಿತ್ತು. ಅದಾದ ಬಳಿಕ ತೀರಾ ಇತ್ತೀಚೆಗಷ್ಟೇ ಅವರು ಭಾರತಕ್ಕೆ ಮರಳಿದ್ದರು. ಪ್ರತೀ ಬಾರಿ ಐಪಿಎಲ್ ಪಂದ್ಯಗಳ ವೇಳೆ ಅನುಷ್ಕಾ ಶರ್ಮಾ ಹಾಜರಿರುತ್ತಿದ್ದರು. ಆದರೆ ಈಗ ಎರಡನೇ ಮಗುವಿನ ಆಗಮನ ಹಿನ್ನಲೆಯಲ್ಲಿ ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಇದೀಗ ಕೊಹ್ಲಿ ಜೊತೆಗೆ ಇದೇ ಮೊದಲ ಬಾರಿ ಈ  ಐಪಿಎಲ್ ಕೂಟದ ಮೊದಲ ಪಂದ್ಯ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದಾರೆ. ಆರ್ ಸಿಬಿ ಪಂದ್ಯದ ವೇಳೆ ಅನುಷ್ಕಾ ಪ್ರಮುಖ ಆಕರ್ಷಣೆಯಾಗಿರುತ್ತಿದ್ದರು. ಆದರೆ ಇದುವರೆಗೆ ಅಭಿಮಾನಿಗಳು ಅನುಷ್ಕಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಈಗ ಅನುಷ್ಕಾ ಬೆಂಗಳೂರಿಗೆ ಕೊಹ್ಲಿ ಜೊತೆ ಆಗಮಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೀಗಾಗಿ ನಾಳೆ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಆರ್ ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನದಲ್ಲಿ ಅನುಷ್ಕಾ ಇರುವುದು ಬಹುತೇಕ ಖಚಿತವಾಗಿದೆ. ಕೊಹ್ಲಿ ಪಾಲಿಗೆ ಅನುಷ್ಕಾ ಲೇಡಿ ಲಕ್. ಹೀಗಾಗಿ ಈ ಪಂದ್ಯದಲ್ಲಿ ಕೊಹ್ಲಿ ಸಿಡಿಯಬಹುದೇ ಎಂಬುದು ಅಭಿಮಾನಿಗಳ ನಿರೀಕ್ಷೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ತಂಡದಲ್ಲಿದ್ದರೂ ಹಾರ್ದಿಕ್ ಪಾಂಡ್ಯಗೆ ಹಿಂಬಡ್ತಿ

Asia Cup: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ಮುಂದಿನ ಸುದ್ದಿ
Show comments