Select Your Language

Notifications

webdunia
webdunia
webdunia
webdunia

ಆಟಗಾರರಿಗೆ ಸ್ವಂತ ನಿರ್ಧಾರ ಕೈಗೊಳ್ಳಲು ಕುಂಬ್ಳೆ ಅವಕಾಶ: ರಾಹುಲ್

ಆಟಗಾರರಿಗೆ ಸ್ವಂತ ನಿರ್ಧಾರ ಕೈಗೊಳ್ಳಲು ಕುಂಬ್ಳೆ ಅವಕಾಶ: ರಾಹುಲ್
ಬೆಂಗಳೂರು: , ಶನಿವಾರ, 2 ಜುಲೈ 2016 (18:09 IST)
ರಾಷ್ಟ್ರೀಯ ತಂಡದ ಹೊಸ ಹೆಡ್ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ಸ್ವಂತ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವ ಮೂಲಕ ಆಟಗಾರರಿಗೆ ಅಧಿಕಾರ ನೀಡಿದ್ದಾರೆ ಎಂದು ಭಾರತದ ಓಪನರ್ ಕೆ. ಎಲ್. ರಾಹುಲ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಆಟಗಾರರಾಗಿರುವ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕುಂಬ್ಳೆ ಮಾರ್ಗದರ್ಶನದಲ್ಲಿ ಸಿದ್ಧತೆ ತರಬೇತಿಯಲ್ಲಿ ಭಾಗವಹಿಸಿದ್ದಾರೆ. 
 
ಕುಂಬ್ಳೆ ಜತೆ ನಾವು  ಸಮಾಲೋಚನೆ ನಡೆಸಿದೆವು ಮತ್ತು ಅವರು ಕೆಲವು ವಿಷಯಗಳಿಗೆ ಒತ್ತು ನೀಡಿದರು.  ಆಟಗಾರರು ಅವರದ್ದೇ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವುದಾಗಿ ಕುಂಬ್ಳೆ ಸ್ಪಷ್ಟಪಡಿಸಿದರು. ನಮಗೆ ಏನಾದರೂ ತೊಂದರೆ ಅಥವಾ ಪ್ರಶ್ನೆಗಳಿದ್ದರೆ ನಾವು ಅವರನ್ನು ಸಂಪರ್ಕಿಸುತ್ತೇವೆ ಎಂದು ರಾಹುಲ್ ತಿಳಿಸಿದರು.
 
ನಮಗೆ ಮಾರ್ಗದರ್ಶನ ನೀಡಿ ಕೋಚ್ ಮಾಡುವ ಕುಂಬ್ಳೆ ಅವರಂತ ಲೆಜೆಂಡ್ ಇರುವುದು ಯುವ ತಂಡಕ್ಕೆ ಹೆಚ್ಚು ಚೈತನ್ಯ ತುಂಬಲಿದೆ. ಅವರ ವೃತ್ತಿಜೀವನದ ಅನುಭವಗಳನ್ನು ನಮ್ಮ ಬಳಿ ಹಂಚಿಕೊಂಡಿದ್ದಾರೆಂದು ರಾಹುಲ್ ಹೇಳಿದರು. 
 
ಕುಂಬ್ಳೆ 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಕಬಳಿಸಿ ಈ ಮಾದರಿಯಲ್ಲಿ ರಾಷ್ಟ್ರೀಯ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಅವರು ತಮ್ಮ ಬದ್ಧತೆ ಮತ್ತು ಹೋರಾಟದ ಮನೋಭಾವಕ್ಕೆ ಹೆಸರಾಗಿದ್ದರು.  ಮಾಜಿ ಲೆಗ್‌ಸ್ಪಿನ್ನರ್ ಅವರಿಂದ ಅಮೂಲ್ಯ ಒಳನೋಟಗಳನ್ನು ಪ್ರಸಕ್ತ ಆಟಗಾರರು ಕಲಿಯಬಹುದು ಎಂದು ಅಭಿಪ್ರಾಯಪಟ್ಟರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೆನಡಾ ಓಪನ್ ಸೆಮಿಫೈನಲ್ ಮುಟ್ಟಿದ ಜಯರಾಮ್, ಪ್ರಣೀತ್