Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಆಷಸ್ ಗೆಲ್ಲಲಿದೆ: ಆಂಡ್ರಿವ್ ಫ್ಲಿಂಟಾಫ್ ಭವಿಷ್ಯ

ಇಂಗ್ಲೆಂಡ್ ಆಷಸ್ ಗೆಲ್ಲಲಿದೆ: ಆಂಡ್ರಿವ್ ಫ್ಲಿಂಟಾಫ್ ಭವಿಷ್ಯ
ಲಂಡನ್ , ಸೋಮವಾರ, 6 ಜುಲೈ 2015 (14:12 IST)
ಬುಧವಾರದಿಂದ ಆರಂಭವಾಗುವ ಆಷಸ್ ಸರಣಿಯಲ್ಲಿ ಅಲಸ್ಟೈರ್ ಕುಕ್ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ 2-1ರ ಜಯಲಭಿಸಲಿದೆ ಎಂದು ಇಂಗ್ಲೆಂಡ್ ಮಾಜಿ ಆಲ್‌ರೌಂಡರ್ ಆಂಡ್ರಿವ್ ಫ್ಲಿಂಟಾಫ್ ಭವಿಷ್ಯ ನುಡಿದಿದ್ದಾರೆ. 
 
 ನ್ಯೂಜಿಲೆಂಡ್ ಜತೆ ಇತ್ತೀಚಿನ ಇಂಗ್ಲೆಂಡ್ ಪ್ರದರ್ಶನದ ಆಧಾರದ ಮೇಲೆ ಅವರು ಮೇಲಿನ ತೀರ್ಮಾನಕ್ಕೆ ಬಂದಿದ್ದಾರೆ.  ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳಲ್ಲಿ ಇಂಗ್ಲೆಂಡ್ ಹೊಸ ದಾಳಿ ಶೈಲಿಯ ಕ್ರಿಕೆಟ್ ಆಡಿದ್ದರಿಂದ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. 
 
 2013-14ರಲ್ಲಿ ಆಸ್ಟ್ರೇಲಿಯಾಕ್ಕೆ 0-5ರಿಂದ ಆಷಸ್ ಸೋತಿದ್ದ ಇಂಗ್ಲೆಂಡ್ ಸ್ವದೇಶಿ ನೆಲದಲ್ಲಿ ಆಷಸ್ ಗೆಲ್ಲುವುದಕ್ಕೆ ದುರ್ಬಲ ತಂಡ ಎನಿಸಿದೆ. ಆದರೆ ಇಂಗ್ಲೆಂಡ್ ಆ ಸ್ಥಾನವನ್ನು ಅಳಿಸಿಹಾಕಿ ಐದು ಟೆಸ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದು ಫ್ಲಿಂಟಾಫ್ ಆಶಿಸಿದ್ದಾರೆ. 
 
 ಕಳೆದ ಕೆಲವು ವಾರಗಳಲ್ಲಿ ತಂಡದಲ್ಲಿ ವ್ಯಾಪಕ ಬದಲಾವಣೆಗಳಾಗಿವೆ. ಇಂಗ್ಲೆಂಡ್ ಈಗ ಉತ್ತಮ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡವನ್ನು ಎಲ್ಲರೂ ಕಡೆಗಣಿಸಿದ್ದಾಗ ಅವರು ಅಪಾಯಕಾರಿಯಾಗಿ ಹೊಮ್ಮಿದರು ಎಂದು ಫ್ಲಿಂಟಾಫ್ ಹೇಳಿದ್ದಾರೆ.
 
ನಾವು ಎರಡು ತಂಡಗಳನ್ನು ಹೋಲಿಸಿ ನೋಡಿದಾಗ ಇಂಗ್ಲೆಂಡ್ ಪ್ರಬಲವಾಗಿದ್ದಂತೆ ಕಾಣುತ್ತದೆ.ಆದಾಗ್ಯೂ ಆಸೀಸ್ ಆತ್ಮವಿಶ್ವಾಸದಿಂದ ಸ್ವಲ್ಪ ಆಕ್ರಮಣಕಾರಿ ವರ್ತನೆ ತೋರಿದರೂ ನಾವು ಕೊನೆಯಲ್ಲಿ 2-1ರಿಂದ ಜಯಶಾಲಿಯಾಗುತ್ತೇವೆ ಎಂದು ಅವರು ಹೇಳಿದರು. 

Share this Story:

Follow Webdunia kannada