Webdunia - Bharat's app for daily news and videos

Install App

ಹನುಮ ವಿಹಾರಿ ಆರೋಪಗಳಿಗೆ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಪ್ರತಿಕ್ರಿಯೆ

Krishnaveni K
ಮಂಗಳವಾರ, 27 ಫೆಬ್ರವರಿ 2024 (10:20 IST)
Photo Courtesy: Twitter
ಹೈದರಾಬಾದ್: ತಂಡದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಆರೋಪಿಸಿ ಆಂಧ್ರ ಕ್ರಿಕೆಟ್ ತಂಡದಿಂದಲೇ ಹೊರಬರುವ ನಿರ್ಧಾರಕ್ಕೆ ಬಂದಿರುವ ಹನುಮ ವಿಹಾರಿ ಆರೋಪಗಳಿಗೆ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಪ್ರತಿಕ್ರಿಯೆ ನೀಡಿದೆ.

ವಿನಾಕಾರಣ ನನ್ನನ್ನು ತಂಡದ ನಾಯಕತ್ವದಿಂದ ಕಿತ್ತು ಹಾಕಲಾಗಿದೆ. ಓರ್ವ ಆಟಗಾರನನ್ನು ಗದರಿದ್ದಕ್ಕೆ ರಾಜಕೀಯ ಹಸ್ತಕ್ಷೇಪದಿಂದಾಗಿ ನನ್ನನ್ನು ನಾಯಕತ್ವದಿಂದ ಕಿತ್ತು ಹಾಕಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡುವುದು ನನಗೆ ಕಷ್ಟವಾಗುತ್ತಿದೆ. ರಾಜಕೀಯಗಳಿಂದ ಬೇಸತ್ತು ಆಂಧ್ರ ತಂಡಕ್ಕೇ ವಿದಾಯ ಹೇಳಲು ಬಯಸುವುದಾಗಿ ಕ್ರಿಕೆಟಿಗ ಹನುಮ ವಿಹಾರಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಅವರ ಈ ಪೋಸ್ಟ್ ಸಂಚಲನ ಸೃಷ್ಟಿಸಿತ್ತು. ತನಗೆ ಇತರೆ ಆಟಗಾರರ ಬೆಂಬಲವೂ ಇದೆ ಎಂದಿದ್ದ ಹನುಮ ವಿಹಾರಿ ಆಟಗಾರರ ಸಹಿಯುಳ್ಳ ಪತ್ರವನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ ಎಂದು ಫೋಟೋ ಪ್ರಕಟಿಸಿದ್ದರು. ಇದರ ಮಧ್ಯೆ ಹನುಮ ವಿಹಾರಿ ಹೆಸರೆತ್ತದೇ ಆರೋಪ ಮಾಡಿದ್ದ ಕ್ರಿಕೆಟಿಗ ಪೃಥ್ವಿ ರಾಜ್ ಕೆಎನ್ ತಾವೇ ಸೋಷಿಯಲ್ ಮೀಡಿಯಾ ಮೂಲಕ ಆರೋಪಗಳಿಗೆ ತಿರುಗೇಟು ನೀಡಿದ್ದರು. ನೀವು ಹುಡುಕಾಡುತ್ತಿರುವ, ಹನುಮ ವಿಹಾರಿ ಆರೋಪ ಮಾಡಿದ್ದ ಹುಡುಗ ನಾನೇ. ಆದರೆ ಅವರ ಆರೋಪದಲ್ಲಿ ಹುರುಳಿಲ್ಲ ಎಂದಿದ್ದರು.

ಇದೀಗ ಇಬ್ಬರು ಕ್ರಿಕೆಟಿಗರ ಸೋಷಿಯಲ್ ಮೀಡಿಯಾ ವಾರ್ ನಡುವೆ ಮಧ‍್ಯಪ್ರವೇಶಿಸಿರುವ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೆ ಬಿಡುಗಡೆ ಮಾಡಿದೆ. ‘ಹನುಮ ವಿಹಾರಿ ಬೆಂಗಾಳ ವಿರುದ್ಧದ ರಣಜಿ ಪಂದ್ಯದ ವೇಳೆ ಓರ್ವ ಆಟಗಾರನ ಮೇಲೆ ವೈಯಕ್ತಿಕ ಟೀಕೆ ಮತ್ತು ನಿಂದನೆ ಮಾಡಿದ್ದಾರೆಂಬುದು ನಮ್ಮ ಗಮನಕ್ಕೆ ಬಂದಿದೆ. ಜನವರಿಯಲ್ಲಿ ವಿಹಾರಿಯ ಟೀಂ ಇಂಡಿಯಾ ಕಮಿಟ್ ಮೆಂಟ್ ಗಮನಿಸಿ ಆಯ್ಕೆ ಸಮಿತಿ ಹೊಸ ನಾಯಕನ ನೇಮಕಕ್ಕೆ ಶಿಫಾರಸ್ಸು ಮಾಡಿತ್ತು. ಅದನ್ನು ವಿಹಾರಿ ಕೂಡಾ ಸ್ವಾಗತಿಸಿದ್ದರು. ಅದರಂತೆ ರಿಕಿ ಭುಯಿ ಅವರನ್ನು ನಾಯಕರಾಗಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಹಾರಿ ನಡತೆ ಬಗ್ಗೆ, ಆಟಗಾರರನ್ನು ನಡೆಸಿಕೊಳ್ಳುವ ಬಗ್ಗೆ ಈಗಾಗಲೇ ಕೆಲವು ಆಟಗಾರರು ದೂರಿದ್ದರು. ಮುಷ್ತಾಕ್ ಅಲಿ ಟೂರ್ನಿ ವೇಳೆ ತಂಡದಲ್ಲಿ ಗುಂಪುಗಾರಿಕೆ ಇರುವ ಬಗ್ಗೆ ಮ್ಯಾನೇಜರ್ ನಮ್ಮ ಗಮನಕ್ಕೆ ತಂದಿದ್ದರು. ಹೈದರಾಬಾದ್ ನಿಂದ ಆಂಧ‍್ರಕ್ಕೆ ಸೇರಿಕೊಂಡ ನಂತರ ಹಲವು ಬಾರಿ ವಿಹಾರಿ ಬೇರೆ ತಂಡಕ್ಕೆ ಸೇರಲು ಎನ್ ಒಸಿ ಪಡದಿದ್ದರು. ಬಳಿಕ ತಕ್ಷಣವೇ ತಮ್ಮ ನಿರ್ಧಾರ ಬದಲಿಸಿ ಕ್ಷಮೆ ಕೇಳುತ್ತಿದ್ದರು. ಈ ರೀತಿ ಹಲವು ಬಾರಿ ಮಾಡಿದ್ದಾರೆ. ಅವರ ಅನುಭವ ಪರಿಗಣಿಸಿ ಎಲ್ಲಾ ಬಾರಿಯೂ ಆಂಧ್ರ ತಂಡಕ್ಕೆ ಪ್ರಯೋಜನವಾಗಬಹುದೆಂಬ ದೃಷ್ಟಿಯಿಂದ ಅವರನ್ನು ಮುಂದುವರಿಸಿದ್ದೆವು. ಈಗಿನ ವಿದ್ಯಮಾನಗಳ ಬಗ್ಗೆ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತನಿಖೆ ನಡೆಸಲಿದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments