Select Your Language

Notifications

webdunia
webdunia
webdunia
webdunia

ಗ್ಲೆನ್ ಮ್ಯಾಕ್ಸ್‌ವೆಲ್ ಆಲ್‌ರೌಂಡ್ ಆಟ: ಆಸ್ಟ್ರೇಲಿಯಾಕ್ಕೆ ಸರಣಿ ಜಯ

ಗ್ಲೆನ್ ಮ್ಯಾಕ್ಸ್‌ವೆಲ್ ಆಲ್‌ರೌಂಡ್ ಆಟ: ಆಸ್ಟ್ರೇಲಿಯಾಕ್ಕೆ ಸರಣಿ ಜಯ
ಪರ್ತ್ , ಭಾನುವಾರ, 1 ಫೆಬ್ರವರಿ 2015 (18:49 IST)
ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು 112 ರನ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು. 95 ರನ್ ಸ್ಕೋರ್ ಮಾಡಿದ್ದ ಮ್ಯಾಕ್ಸ್‌ವೆಲ್ 46ಕ್ಕೆ 4 ವಿಕೆಟ್ ಕಬಳಿಸಿ ಬೌಲಿಂಗ್‌ನಲ್ಲೂ ಮಿಂಚಿದರು.

ಮಿಚೆಲ್ ಜಾನ್ಸನ್  27 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಒಂದು ಹಂತದಲ್ಲಿ ಆಸ್ಪ್ರೇಲಿಯಾ 4 ವಿಕೆಟ್ ಕಳೆದುಕೊಂಡು ಕೇವಲ 60 ರನ್ ಗಳಿಸಿ ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಆತಿಥೇಯ ತಂಡ ಚೇತರಿಸಿಕೊಂಡು 8 ವಿಕೆಟ್‌ಗೆ 278 ರನ್ ಗಳಿಸಿತು.

ಜಾನ್ಸನ್ ಇಂಗ್ಲಂಡ್ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರೆ, ಮ್ಯಾಕ್ಸ್‌ವೆಲ್ ಅವರ ಆಫ್‌ಸ್ಪಿನ್ ಉಳಿದವರನ್ನು ಔಟ್ ತೆಗೆಯಿತು. ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ದ ಆಡಿದ 15 ಏಕದಿನಪಂದ್ಯಗಳಲ್ಲಿ 13ರಲ್ಲಿ ಸೋತಿದ್ದು, ಫೆಬ್ರವರಿ 14ರಂದು ಆಸ್ಟ್ರೇಲಿಯಾ ವಿರುದ್ದ ವಿಶ್ವಕಪ್ ಎದುರಿಸಲಿದೆ.

Share this Story:

Follow Webdunia kannada