Select Your Language

Notifications

webdunia
webdunia
webdunia
webdunia

ಗ್ರಹಾಂ ಟೆಸ್ಟ್ ರನ್ ದಾಖಲೆ ಮುರಿಯುವ ಸನಿಹದಲ್ಲಿ ಅಲಸ್ಟೈರ್ ಕುಕ್

ಗ್ರಹಾಂ ಟೆಸ್ಟ್ ರನ್ ದಾಖಲೆ ಮುರಿಯುವ ಸನಿಹದಲ್ಲಿ ಅಲಸ್ಟೈರ್ ಕುಕ್
ಲೀಡ್ಸ್ , ಶುಕ್ರವಾರ, 29 ಮೇ 2015 (10:39 IST)
ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ಅವರು ಗ್ರಹಾಂ ಗೂಚ್ ಅವರ ಇಂಗ್ಲೆಂಡ್ ಟೆಸ್ಟ್ ರನ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.  ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್‌ನ 124 ರನ್ ಜಯದಲ್ಲಿ ಭರ್ಜರಿ 162 ರನ್ ಬಾರಿಸಿದ ಕುಕ್, ಹೆಡಿಂಗ್ಲೆಯಲ್ಲಿ ಶುಕ್ರವಾರದಿಂದ ಆರಂಭವಾಗುವ ಮೊದಲ ಟೆಸ್ಟ್‌ನಲ್ಲಿ ಗೂಚ್ ಅವರ 8900 ಟೆಸ್ಟ್ ರನ್ ಗಡಿಯನ್ನು ದಾಟಲು  ಕೇವಲ 32 ರನ್ ಅಗತ್ಯವಿದೆ. ಈ ಪಂದ್ಯದಲ್ಲಿ ಕುಕ್ ಈ ಸಾಧನೆ ಮಾಡಿದರೆ, ಗೂಚ್ ಅವರ 118 ಟೆಸ್ಟ್‌ ಪಂದ್ಯಗಳಿಗೆ ಹೋಲಿಸಿದರೆ ಕುಕ್ 114 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ ಹಾಗಾಗುತ್ತದೆ.
 
ಇದೊಂದು ಭವ್ಯ ಕ್ಷಣವಾಗಿದೆ. ಆದರೆ ಅವರಷ್ಟು ಶ್ರೇಷ್ಟ ದರ್ಜೆಯ ಆಟಕ್ಕೆ ಸಮೀಪದಲ್ಲಿ ನಾನಿರದಿದ್ದರೂ ಅದೊಂದು ಮಹತ್ತರ ಕ್ಷಣ ಎಂದು ಕುಕ್ ಹೆಡಿಂಗ್ಲೆಯಲ್ಲಿ ಗುರುವಾರ ತಿಳಿಸಿದರು.
 
 ಕುಕ್ ಮೊದಲಿಗೆ ಹರೆಯದಲ್ಲಿದ್ದಾಗ ಗೂಚ್ ಜೊತೆ ಕಾರ್ಯನಿರ್ವಹಿಸಿದ್ದರು. ಇಂಗ್ಲೆಂಡ್ ಮಾಜಿ ನಾಯಕನಿಗೆ ತಾವು ಋಣಿಯಾಗಿರುವುದಾಗಿ ಅವರು ಹೇಳಿದರು. ಗೂಚ್ ನೆರವಿಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ. ಗೂಚ್ ನೆರವಿಲ್ಲದೆ ನಾನು ಅವರ ದಾಖಲೆ ಮುರಿದರೆ  ಅದೊಂದು ವಿಚಿತ್ರ ಸಂಗತಿಯಾಗಿರುತ್ತದೆ. ಏಕೆಂದರೆ ಅವರ ಪರಿಶ್ರಮ ಮತ್ತು ಮುಡಿಪು ಇಲ್ಲದಿದ್ದರೆ, ನಾನು ಸ್ಕೋರ್ ಮಾಡಿದ ಅರ್ಧದಷ್ಟು ಸ್ಕೋರ್ ಮಾಡಲಾಗುತ್ತಿರಲಿಲ್ಲ.

ಗೂಚ್ ಇಂಗ್ಲೆಂಡ್‌ನ ಮಹಾನ್ ಆಟಗಾರ ಎಂದು ಹೇಳಿದರು. ಕಳೆದ ವರ್ಷದ ಮೇನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಆಗಿ ಗೂಚ್ ಅವರನ್ನು ವಜಾ ಮಾಡಲಾಗಿತ್ತು. ಆದರೆ ತರುವಾಯ ತಾವೇ ಮೂಲ ಮಾರ್ಗದರ್ಶಿಯ ಸಲಹೆ ಪಡೆಯಲು ಅವರ ಬಳಿ ಹೋಗಿದ್ದಾಗಿ ಕುಕ್ ಹೇಳಿದರು.  ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಜಯಗಳಿಸಿದ ಬಳಿಕ, ಆಸ್ಟ್ರೇಲಿಯನ್ ಟ್ರೆವರ್ ಬೇಲಿಸ್ ಅವರನ್ನು ಇಂಗ್ಲೆಂಡ್ ಹೊಸ ಕಾಯಂ ಕೋಚ್ ಹುದ್ದೆಗೆ ದೃಢೀಕರಿಸಲಾಗಿದೆ. 

Share this Story:

Follow Webdunia kannada