Webdunia - Bharat's app for daily news and videos

Install App

ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಇಟ್ಟ ಬಾಂಬ್ ಗೆ ತಲ್ಲಣಗೊಂಡ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ

Webdunia
ಗುರುವಾರ, 12 ಜನವರಿ 2017 (10:43 IST)
ಮುಂಬೈ: ಬಿಸಿಸಿಐಯಲ್ಲಿ ಅಧ್ಯಕ್ಷ, ಕಾರ್ಯದರ್ಶಿಗಳೆಲ್ಲರೂ ಅಧಿಕಾರ ಕಳೆದುಕೊಂಡು ಮೂಲೆ ಸೇರಿದ್ದಾರೆ. ಹೀಗಿರುವಾಗ ಕ್ರಿಕೆಟ್ ಸರಣಿ ನಡೆಯುವುದೇ ಕಷ್ಟ ಎಂದು ಪದಚ್ಯುತ ಕಾರ್ಯದರ್ಶಿ ಅಜಯ್ ಶಿರ್ಕೆ ಫಿಟ್ಟಿಂಗ್ ಇಟ್ಟಿದ್ದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಆತಂಕವಾಗಿದೆ. ಆದರೆ ಅವರಿಗೆ ಬಿಸಿಸಿಐ ಅಭಯ ನೀಡಿದೆ.


ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಕರೆ ಮಾಡಿದ್ದ ಅಜಯ್ ಶಿರ್ಕೆ ಈ ಸರಣಿ ನಡೆಯುವುದೇ ಅನುಮಾನ ಎಂದು ಬಾಂಬ್ ಸಿಡಿಸಿದ್ದರು. ಇದರಿಂದ ಕಳವಳಗೊಂಡಿದ್ದ ಇಸಿಬಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಜೋಹ್ರಿ ಉಭಯ ದೇಶಗಳ ಕ್ರಿಕೆಟ್ ಸರಣಿಗೆ ಯಾವುದೇ ತೊಂದರೆಯಿಲ್ಲ ಎಂದು ಅಭಯವಿತ್ತಿದ್ದಾರೆ. “ನಮ್ಮ ತಂಡಕ್ಕೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನೂ ಮಾಡಿಕೊಡುತ್ತೀರಲ್ಲಾ? ಅದರಲ್ಲೂ ವಿಶೇಷವಾಗಿ ಆಟಗಾರರ ಭತ್ಯೆ, ಉಳಕೊಳ್ಳುವ ವ್ಯವಸ್ಥೆ ಪ್ರಯಾಣ ವ್ಯವಸ್ಥೆ ಬಗ್ಗೆ ನಮಗೆ ಕಳವಳವಿದೆ” ಇಸಿಬಿ ಬಿಸಿಸಿಐಗೆ ಪತ್ರ ಬರೆದಿತ್ತು.

ಇದಕ್ಕೆ ಉತ್ತರಿಸಿದ ಬಿಸಿಸಿಐ ಈಗಾಗಲೇ ತಂಡ ಘೋಷಿಸಲಾಗಿದ್ದು, ಕ್ರಿಕೆಟ್ ಸರಣಿ ಯಾವುದೇ ತೊಂದರೆಯಾಗದಂತೆ ನಡೆಯಲಿದೆ ಎಂದು ಬಿಸಿಸಿಐ ಭರವಸೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments