Webdunia - Bharat's app for daily news and videos

Install App

ಮದುವೆಯಾದ ಮೇಲೆ ಇಶಾಂತ್ ಶರ್ಮಾಗೆ ಅದೃಷ್ಟವೋ ಅದೃಷ್ಟ

Webdunia
ಶನಿವಾರ, 24 ಡಿಸೆಂಬರ್ 2016 (06:43 IST)
ನವದೆಹಲಿ: ಕೆಲವರಿಗೆ ಮದುವೆಯಾದ ಮೇಲೆ ಅದೃಷ್ಟ ಖುಲಾಯಿಸುತ್ತದೆ. ಅಂತಹವರಲ್ಲಿ ಬಹುಶಃ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡಾ ಒಬ್ಬರು. ಅವರಿಗೀಗ ಹಲವು ದಿನಗಳ ನಂತರ ಏಕದಿನ ಜೆರ್ಸಿ ತೊಡುವ ಭಾಗ್ಯ ಲಭಿಸುವ ಲಕ್ಷಣ ಕಾಣುತ್ತಿದೆ.


ಇತ್ತೀಚೆಗಷ್ಟೇ ಮದುವೆಯಾದ ಇಶಾಂತ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದ ಆಡಲಾಗಿರಲಿಲ್ಲ. ಅದಕ್ಕಿಂತ ಮೊದಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಚಿಕೂನ್ ಗುನ್ಯಾದಿಂದ ಹಾಸಿಗೆ ಹಿಡಿದು ಆಡುವುದನ್ನು ತಪ್ಪಿಸಿಕೊಂಡರು. ಆದರೆ ಮದುವೆಯಾದ ಎರಡೇ ದಿನಕ್ಕೆ ಅವರಿಗೆ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಆಡುವ ಅವಕಾಶ ಸಿಕ್ಕಿತ್ತು. ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಅವರಿಗೀಗ ಒಳ್ಳೆ ಅವಕಾಶವೇ ಲಭಿಸಲಿದೆ.

ವೇಗಿ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಏಕದಿನ ಸರಣಿಯನ್ನೂ ತಪ್ಪಿಸಿಕೊಳ್ಳಲಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಇಶಾಂತ್ ಆಯ್ಕೆಯಾಗುವ ನಿರೀಕ್ಷೆಯಿದೆ. ಆಯ್ಕೆ ಸಮಿತಿ ಇನ್ನೂ ಈ ಬಗ್ಗೆ ಚರ್ಚಿಸಿಲ್ಲ. ಅಲ್ಲದೆ ಹಿರಿಯ ವೇಗಿ ಆಶಿಷ್ ನೆಹ್ರಾ ಕೂಡಾ ಆಯ್ಕೆಗಾರರ ಮನದಲ್ಲಿದ್ದಾರಂತೆ. ಆದರೆ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಧಾರದಲ್ಲಿ ಇಶಾಂತ್ ಆಯ್ಕೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಪಂದ್ಯ ಪುನರ್‌ ಆರಂಭಗೊಳ್ಳುತ್ತಿದ್ದ ಹಾಗೇ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

Rohit Sharma:ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಗಾಟಿಸಿದ ವಿಶೇಷ ವ್ಯಕ್ತಿಗಳು ಯಾರು ವಿಡಿಯೋ ನೋಡಿ

Pakistan, India: ಭಾರತ-ಪಾಕ್ ನಡುವಿನ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶದ ಪಾಕಿಸ್ತಾನ ಪ್ರವಾಸ ರದ್ದಾಗುವ ಸಾಧ್ಯತೆ

IPL 2025: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಮ್ ಡೇವಿಡ್ ನೀರಾಟ, Video Viral

Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಶಾಕಿಂಗ್ ಸತ್ಯ ರಿವೀಲ್ ಮಾಡಿದ ರವಿಶಾಸ್ತ್ರಿ

ಮುಂದಿನ ಸುದ್ದಿ
Show comments