Select Your Language

Notifications

webdunia
webdunia
webdunia
webdunia

ವಿಶ್ವಕಪ್ 2015ರ ಆಟದಲ್ಲಿ ಬದಲಾವಣೆ ತಂದ ತಂತ್ರಜ್ಞಾನಗಳು

ವಿಶ್ವಕಪ್ 2015ರ ಆಟದಲ್ಲಿ ಬದಲಾವಣೆ ತಂದ  ತಂತ್ರಜ್ಞಾನಗಳು
ಮೆಲ್ಬರ್ನ್ , ಬುಧವಾರ, 1 ಏಪ್ರಿಲ್ 2015 (17:09 IST)
ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಂಪೈರ್‌ನ ಯಾವುದೇ ತಪ್ಪು ನಿರ್ಧಾರದಿಂದ ಇಡೀ ರಾಷ್ಟ್ರ ಅವರ ವಿರುದ್ಧ ತಿರುಗಿ ಬೀಳಬಹುದು. ಆದರೆ ತೀರ್ಪಿನ ಬಗ್ಗೆ ಅನುಮಾನ ಬಂದಾಗ, ಆಟವು ತಂತ್ರಜ್ಞಾನದ ಮೇಲೆ ತನ್ನ ಭರವಸೆ ಇಟ್ಟುಕೊಂಡಿರುತ್ತದೆ.  ಭಾರತದ ರೋಹಿತ್ ಶರ್ಮಾ ಅವರಿಗೆ ಬಾಂಗ್ಲಾದ ರುಬೆಲ್ ಹುಸೇನ್ ಶಂಕಿತ ಎಸೆತಕ್ಕೆ ನಾಟೌಟ್ ನೀಡಿದಾಗ, ಈ ತೀರ್ಪಿನ ತಪ್ಪಿನ ಬಗ್ಗೆ ಗಮನಸೆಳೆಯಲು ತಂತ್ರಜ್ಞಾನವನ್ನು ಬಳಸಲಾಯಿತು.  ಕೆಳಗೆ ತಂತ್ರಜ್ಞಾನದ ಕೆಲವು ಸುಧಾರಣೆಗಳನ್ನು  ಕೊಡಲಾಗಿದ್ದು, ಇದರಿಂದ ಕ್ರಿಕೆಟ್ ವೀಕ್ಷಣೆ ಇನ್ನಷ್ಟು ಮೌಲ್ಯದಿಂದ ಕೂಡಿರುತ್ತದೆ. 
 
ಎಲ್ಇಡಿ ಸ್ಟಂಪ್ಸ್ ಮತ್ತು ಬೇಲ್ಸ್ 
 ಬೇಲ್ ಸ್ಟಂಪ್ಸ್‌ನಿಂದ ಸಂಪೂರ್ಣ ಬಿದ್ದಾಗ ಮಾತ್ರ ಎಲ್‌ಇಡಿ ಲೈಟ್ ಬೆಳಗುತ್ತದೆ. ಇದರಿಂದ ಮೂರನೇ ಅಂಪೈರ್‌ಗೆ ಸ್ಪಷ್ಟ ದೃಶ್ಯ ಕಾಣುತ್ತದೆ. 
ಸ್ನಿಕೋ
ಸಾಮಾನ್ಯವಾಗಿ ಸ್ನಿಕೋ ಎಂದು ಹೆಸರಾಗಿರುವ ಇದು ಚೆಂಡು ಬ್ಯಾಟ್ ಅನ್ನು ಹಾದುಹೋಗುವಾಗ ಶಬ್ದ ಮತ್ತು ವಿಡಿಯೋದ ಗ್ರಾಫಿಕಲ್ ವಿಶ್ಲೇಷಣೆಗೆ ನೆರವಾಗುತ್ತದೆ. 
ಬಾಲ್ ಟ್ರಾಕಿಂಗ್ 
ಮೈದಾನದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಇರಿಸಿರುವ 6 ಕ್ಯಾಮೆರಾಗಳು ಬೌಲರ್ ಕೈಯಿಂದ ಚೆಂಡು ಬಿಡುಗಡೆಯಾಗಿ ಅದು ಚಲನೆ ಸ್ಥಗಿತಗೊಳಿಸುವ ತನಕ ಚೆಂಡಿನ ಮಾರ್ಗದ  ಜಾಡು ಹಿಡಿಯುತ್ತವೆ. 
 
ಪಿಚ್ ವಿಷನ್ 
 ಪಿಚ್ ವಿಷನ್ ನೆರವಿನಿಂದ ಪ್ರತಿಯೊಂದು ಎಸೆತದಲ್ಲಿ ಚೆಂಡು ಬೀಳುವ ಜಾಗವನ್ನು ಅಥವಾ ಭಿನ್ನ ಪೇಸ್, ಲೈನ್  ಲೆಂಗ್ತ್ ಎಸೆತಗಳಲ್ಲಿ ಬ್ಯಾಟ್ಸ್‌ಮನ್ ಪ್ರದರ್ಶನವನ್ನು ತೋರಿಸುತ್ತದೆ. 
ಬಾಲ್ ಸ್ಪಿನ್ ಆರ್‌ಪಿಎಂ
ಬಾಲ್ ಸ್ಪಿನ್ ಆರ್‌ಪಿಎಂ ಚೆಂಡು ಸ್ಪಿನ್ ಬೌಲರ್ ಕೈಯಿಂದ ಬಿಡುಗಡೆಯಾದ ಕೂಡಲೇ ಎಷ್ಟು ವೇಗವಾಗಿ ಸ್ಪಿನ್ ಆಗುತ್ತದೆ ಎನ್ನುವುದನ್ನು ತೋರಿಸುತ್ತದೆ. 
ಹಾಟ್ ಸ್ಪಾಟ್
ಇದೊಂದು ಇಮೇಜಿಂಗ್ ವ್ಯವಸ್ಥೆಯಾಗಿದ್ದು, ಚೆಂಡು ಬ್ಯಾಟ್ಸ್‌ಮನ್‌ಗೆ, ಬ್ಯಾಟ್‌ಗೆ ಅಥವಾ ಪ್ಯಾಡ್‌ಗೆ ತಾಗಿದೆಯಾ ಎಂಬುದನ್ನು ತೋರಿಸುತ್ತದೆ. ಮೈದಾನದಲ್ಲಿ ವಿರುದ್ಧ ದಿಕ್ಕುಗಳಲ್ಲಿ ಎರಡು ಇನ್ಫ್ರಾ ರೆಡ್ ಕ್ಯಾಮೆರಾಗಳನ್ನು ಇದು ಬಳಸುತ್ತದೆ. ಬ್ಯಾಟ್ ಅಥವಾ ಪ್ಯಾಡ್‌ಗೆ ಚೆಂಡು ಬಡಿಯುವ ಚಿತ್ರವನ್ನು ಇದು ಸೆರೆಹಿಡಿಯುತ್ತದೆ. 
 

Share this Story:

Follow Webdunia kannada