Webdunia - Bharat's app for daily news and videos

Install App

ಕೈಕೈ ಮಿಲಾಯಿಸಿದ ಕ್ರಿಕೆಟ್ ಅಭಿಮಾನಿಗಳು, ನಾಲ್ವರಿಗೆ ಗಾಯ

Webdunia
ಸೋಮವಾರ, 16 ಫೆಬ್ರವರಿ 2015 (15:12 IST)
ನ್ಯೂ ಸೌತ್ ವೇಲ್ಸ್ ಕ್ಲಬ್‌ವೊಂದರಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ಅಭಿಮಾನಿಗಳು ಪಂದ್ಯ ವೀಕ್ಷಿಸುತ್ತಿದ್ದಾಗ  ಪಾಕಿಸ್ತಾನ ಪಂದ್ಯದಲ್ಲಿ ಸೋಲುತ್ತಿದ್ದ ಹಾಗೆ ಪಾಕ್ ಹಾಗೂ ಭಾರತ ಅಭಿಮಾನಿಗಳು ಕೈಕೈ ಮಿಲಾಯಿಸಿ ಹೊಡೆದಾಡತೊಡಗಿದ್ದರಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. 
 
ಸುಮಾರು 40 ಜನರು ಕೈಕೈ ಮಿಲಾಯಿಸಿ ಹೊಡೆದಾಟಕ್ಕಿಳಿದರು. ಮೆರಿಲ್ಯಾಂಡ್ ಆರ್‌ಎಸ್ಎಲ್ ಕ್ಲಬ್ ರಣಾಂಗಣದಂತೆ ಗೋಚರಿಸಿತು. ಕುರ್ಚಿಗಳನ್ನು ಎತ್ತಿಕೊಂಡು ಒಬ್ಬರ ಮೈಮೇಲೊಬ್ಬರು ಪರಸ್ಪರ ಎರಚಾಡಿದರು.  ಅಡೆಲೈಡ್ ಓವಲ್‌ನಲ್ಲಿ ಸುಮಾರು 50,000 ಅಭಿಮಾನಿಗಳು ಕಡು ವೈರಿ ಪಾಕಿಸ್ತಾನದ ವಿರುದ್ಧ ವಿಜಯವನ್ನು ಸಂಭ್ರಮಿಸುತ್ತಿರುವ ನಡುವೆ  ಕ್ಲಬ್‌ನೊಳಗೆ 40 ಜನರು ಪರಸ್ಪರ ಹೊಡೆದಾಡಿಕೊಂಡರು. ನಾಲ್ವರನ್ನು ಗಂಭೀರವಾದ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಯಿತು.

ಭಾರತದ ಗೆಲುವಿಗೆ 20 ನಿಮಿಷಗಳ ಮುಂಚೆ ಕೆಲವು ಅತೀಭಾವುಕ ಅಭಿಮಾನಿಗಳು ತಳ್ಳಾಟ, ನೂಕಾಟ ಷುರುಮಾಡಿದರು. ಪಾಕಿಸ್ತಾನದ ಕಡೆ ಆಟಗಾರ ಸಿಕ್ಸರ್ ಬಾರಿಸಿದ ಕೂಡಲೇ ವ್ಯಕ್ತಿಯೊಬ್ಬ ಕುರ್ಚಿಯೊಂದನ್ನು ತೆಗೆದುಕೊಂಡು ಕೆಲವರ ಮೇಲೆ ಎಸೆದಿದ್ದು, ಗಲಾಟೆಗೆ ನಾಂದಿ ಹಾಡಿತು.

ಈ ದೃಶ್ಯಗಳನ್ನು ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದಿವೆ. ಆಗ ಇನ್ನುಳಿದವರು ಮುಷ್ಠಿಕಾಳಗಕ್ಕೆ ಇಳಿದರು ಮತ್ತು ಪೀಠೋಪಕರಣಗಳನ್ನು ಎಸೆಯತೊಡಗಿದರು. ಪೊಲೀಸರು ಸಿಸಿಟಿವಿ ಕ್ಯಾಮೆರಾ ಗಮನಿಸುತ್ತಿದ್ದು, ಭಾಗಿಯಾದ ಎಲ್ಲರನ್ನೂ ಗುರುತಿಸುವ ಸಾಧ್ಯತೆಯಿದೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments