Webdunia - Bharat's app for daily news and videos

Install App

ಅಜರ್ ಅಲಿ ಶತಕ : ಪಾಕ್‌ಗೆ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೇಲುಗೈ

Webdunia
ಶುಕ್ರವಾರ, 5 ಆಗಸ್ಟ್ 2016 (10:14 IST)
ಅಜರ್‌ಅಲಿ ಅವರ ಶತಕದ ನೆರವಿನಿಂದ ಇಂಗ್ಲೆಂಡ್ ತಂಡದ ವಿರುದ್ಧ ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿದೆ. ಇಂಗ್ಲೆಂಡ್‌ನ 297 ರನ್ ಸ್ಕೋರಿನ ಗಡಿ ಮುಟ್ಟಲು 40 ರನ್ ಮಾತ್ರ ಬಾಕಿವುಳಿದಿದೆ. ಅಜರ್ ಅವರ 6 ಗಂಟೆಗಳ ಕಾಲದ 139 ಅವರ 10ನೇ ಟೆಸ್ಟ್ ಶತಕವಾಗಿದ್ದು, 2ನೇ ದಿನದ ಅಂತಿಮ ಎಸೆತದಲ್ಲೇ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿ ಅಲಸ್ಟೈರ್ ಕುಕ್ ಅವರಿಗೆ ಕ್ಯಾಚಿತ್ತು ಔಟಾದರು.

ಮೊಹಮ್ಮದ್ ಹಫೀಜ್‌ ಶೂನ್ಯಕ್ಕೆ ಔಟಾಗಿ ಪಾಕಿಸ್ತಾನ ಒಂದೂ ರನ್ ಸ್ಕೋರ್ ಮಾಡದೇ ಒಂದು ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಅಜರ್ ಆಡಲು ಬಂದರು. ಇಂಗ್ಲೆಂಡ್ ತಂಡದಿಂದ ಎರಡು ಬಾರಿ ಜೀವದಾನ ಪಡೆದ ಅಜರ್ ಸಮಿ ಅಸ್ಲಾಂ ಜತೆಗೆ ಎರಡನೇ ವಿಕೆಟ್‌ಗೆ 181 ರನ್ ಕಲೆಹಾಕಿದರು. ಸಮಿ ಅಸ್ಲಾಂ 82 ರನ್ ಮಾಡಿದ್ದರು.
 
ಅಸ್ಲಾಂ 20 ವರ್ಷದ ಎಡಗೈ ಓಪನರ್ ಆಗಿದ್ದು ಚೊಚ್ಚಲ ಟೆಸ್ಟ್ ಶತಕ ಗಳಿಸುವ ಸನಿಹದಲ್ಲಿದ್ದಾಗ ರನ್‌ಔಟ್‌ಗೆ ಬಲಿಯಾದರು. ಯೂನಿಸ್ ಖಾನ್ ಅವರು ಅಜೇಯ 21 ರನ್ ಗಳಿಸಿದ್ದು, ಮೂರನೇ ವಿಕೆಟ್‌ಗೆ 76 ರನ್ ಸೇರಿಸಲು ಅಜರ್‌ಗೆ ನೆರವಾಯಿತು.
ಜೇಮ್ಸ್ ಆಂಡರ್‌ಸನ್‌ಗೆ ಪಿಚ್‌ನಲ್ಲಿ ಓಡಿದ್ದಕ್ಕಾಗಿ ಆಸ್ಟ್ರೇಲಿಯಾ ಅಂಪೈರ್ ಎರಡು ಬಾರಿ ಎಚ್ಚರಿಸಿದ್ದರಿಂದ ಇಂಗ್ಲೆಂಡ್‌ಗೆ ಮೈದಾನದಲ್ಲಿ ಕಠಿಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
 
 ಇನ್ನೊಂದು ಎಚ್ಚರಿಕೆ ಹೊರಬಿದ್ದರೆ ಆಂಡರ್‌ಸನ್ ಅವರನ್ನು ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಿಂದ ನಿಷೇಧಿಸಲಾಗುತ್ತದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 297 ರನ್
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 257ಕ್ಕೆ 3 ವಿಕೆಟ್
ಸಮಿ ಅಸ್ಲಾಂ 82 ರನ್, ಅಜರ್ ಅಲಿ 139 ರನ್, ಯೂನಿಸ್ ಖಾನ್ 21 ನಾಟೌಟ್
ವಿಕೆಟ್ ಪತನ
0-1(ಮೊಹಮ್ಮದ್ ಹಫೀಜ್, 0-4), 181-2(ಸಮಿ ಅಸ್ಲಾಂ, 62.2), 257ಕ್ಕೆ 3( ಅಜರ್ ಅಲಿ, 89.6)
 ಬೌಲಿಂಗ್ ವಿವರ 
ಆಂಡರ್ಸನ್ 1 ವಿಕೆಟ್, ಕ್ರಿಸ್ ವೋಕ್ಸ್ 1 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments