Select Your Language

Notifications

webdunia
webdunia
webdunia
webdunia

2ನೇ ಟಿ 20: ಆಸ್ಟ್ರೇಲಿಯಾ ವಿರುದ್ಧ ಭಾರತ 3 ವಿಕೆಟ್‌ಗೆ 184 ರನ್

2ನೇ ಟಿ 20: ಆಸ್ಟ್ರೇಲಿಯಾ ವಿರುದ್ಧ ಭಾರತ  3 ವಿಕೆಟ್‌ಗೆ 184 ರನ್
ಮೆಲ್ಬೋರ್ನ್: , ಶುಕ್ರವಾರ, 29 ಜನವರಿ 2016 (16:45 IST)
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 184 ರನ್ ಗಳಿಸುವ ಮೂಲಕ ಸವಾಲಿನ ಸ್ಕೋರನ್ನು ದಾಖಲಿಸಿದೆ.

ರೋಹಿತ್ ಶರ್ಮಾ ಅವರು 47 ಎಸೆತಗಳಲ್ಲಿ 60 ರನ್ ಗಳಿಸಿದರು ಮತ್ತು ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ ಬಿರುಸಿನ 59 ರನ್ ಗಳಿಸಿದರು. ಅವರ ಸ್ಕೋರಿನಲ್ಲಿ 7 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು.

ರೋಹಿತ್ ಶರ್ಮಾ ಅವರ ಸ್ಕೋರಿನಲ್ಲಿ 5 ಬೌಂಡರಿಗಳು ಮತ್ತು  2 ಸಿಕ್ಸರ್ ಇತ್ತು. ಶಿಖರ್ ಧವನ್ 32 ಎಸೆತಗಳಲ್ಲಿ 42 ರನ್ ಹೊಡೆದರು. ಮೊದಲ ಟಿ 20 ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲುವು ಗಳಿಸುವ ಮೂಲಕ ಶುಭಾರಂಭ ಮಾಡಿದೆ. 

Share this Story:

Follow Webdunia kannada