Select Your Language

Notifications

webdunia
webdunia
webdunia
webdunia

ತೆಂಡೂಲ್ಕರ್-ವಾರ್ನ್ ಕನಸಿನ ಕೂಸು ಟಿ20 ಲೀಗ್‌ಗೆ ಚಾಲನೆ

ತೆಂಡೂಲ್ಕರ್-ವಾರ್ನ್ ಕನಸಿನ ಕೂಸು ಟಿ20 ಲೀಗ್‌ಗೆ ಚಾಲನೆ
ನವದೆಹಲಿ , ಬುಧವಾರ, 27 ಮೇ 2015 (12:48 IST)
ಕ್ರಿಕೆಟ್ ಲೋಕದ ದಿಗ್ಗಜಗಳಾದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್  ಕ್ರಿಕೆಟ್‌ನ ಪ್ರಸಿದ್ಧ ಮಾಜಿ ಆಟಗಾರರನ್ನು ಸೇರಿಸಿಕೊಂಡು ಟ್ವೆಂಟಿ 20 ಲೀಗ್ ಸ್ಥಾಪನೆಗೆ ಚಾಲನೆ ನೀಡಿದ್ದಾರೆ. ಏಳು ಕ್ರಿಕೆಟ್ ರಾಷ್ಟ್ರಗಳ ಮಹಾನ್ ಕ್ರಿಕೆಟಿಗರು ಈ ಲೀಗ್‌ಗೆ ಈಗಾಗಲೇ ಸಹಿ ಹಾಕಿದ್ದು, ಇನ್ನೂ ಕೆಲವರನ್ನು ಸಂಪರ್ಕಿಸಲಾಗುತ್ತಿದೆ. 
 
 
ತೆಂಡೂಲ್ಕರ್ 2014ರ ಜುಲೈ 5ರಂದು ಲಾರ್ಡ್ಸ್ ದ್ವಿಶತಮಾನೋತ್ಸವ ಪಂದ್ಯವಾಡುವಾಗ ಮಾಜಿ ಅಂತಾರಾಷ್ಟ್ರೀಯ ಆಟಗಾರರಿಂದ ಕೂಡಿದ ಲೀಗ್ ಕಲ್ಪನೆಯು ಅವರ ಮನಸ್ಸಿನಲ್ಲಿ ಹೊಳೆಯಿತು.  ಮಾಸ್ಟರ್ ಬ್ಲಾಸ್ಟರ್ ತಮ್ಮ ಅನಿಸಿಕೆಗಳನ್ನು ಆಸ್ತ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ ಅವರಲ್ಲಿ ಹಂಚಿಕೊಂಡಾಗ ಪಂದ್ಯಾವಳಿಯನ್ನು ಯಶಸ್ಸುಗೊಳಿಸಲು ಇವರಿಬ್ಬರು ಕಾರ್ಯೋನ್ಮುಖರಾದರು.
 
 ಈ ಯೋಜನೆಯು ಕಿರು ರೂಪದ ಕ್ರಿಕೆಟ್‌ನಲ್ಲಿ ನೈಜ ದಿಗ್ಗಜರು ಕ್ರಿಯಾಶೀಲರಾಗುವ ಕಲ್ಪನೆಯನ್ನು ಆಧರಿಸಿದೆ. ನಿಜವಾದ ಕ್ರಿಕೆಟ್ ಲೆಜೆಂಡ್‌ಗಳನ್ನು ಸೇರಿಸಿಕೊಳ್ಳುವುದಕ್ಕೆ ಅಭಿಮಾನಿಗಳು ಅವರ ಆಟದ ವೀಕ್ಷಣೆಗೆ ಬರುತ್ತಾರೆಂಬ ದೃಷ್ಟಿಯಿಂದ ಮಹತ್ವ ನೀಡಲಾಗಿದೆ. 
 
 ಪ್ರಸ್ತಾವನೆ ಪ್ರಕಾರ, ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಪಂದ್ಯಾವಳಿ ಆರಂಭವಾಗುತ್ತದೆ. ಗ್ಲೆನ್ ಮೆಕ್‌ಗ್ರಾಥ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಗಿಲ್ ಕ್ರಿಸ್ ಸೇರಿದಂತೆ ಒಟ್ಟು 28 ಆಟಗಾರರು ಪಂದ್ಯಾವಳಿ ಭಾಗವಾಗಿರುತ್ತಾರೆ. 
 
ಮೂರುವರೆ ವರ್ಷಗಳ ಕಾಲಾವಧಿಯಲ್ಲಿ ಜಗತ್ತಿನಾದ್ಯಂತ ಅನೇಕ ಪಂದ್ಯಗಳನ್ನು ಆಡಿಸಲಾಗುತ್ತದೆ. ಅಮೆರಿಕವು ಮೊದಲ ಸರಣಿಗೆ ಸೆಪ್ಟೆಂಬರ್‌ನಲ್ಲಿ ಆತಿಥ್ಯ ವಹಿಸಲಿದೆ. ನ್ಯೂಯಾರ್ಕ್ ಮತ್ತು ಚಿಕಾಗೊ ಅಮೆರಿಕದಲ್ಲಿ ಪಂದ್ಯಗಳನ್ನಾಡಿಸುವುದಕ್ಕೆ ಮುಖ್ಯ ಸ್ಪರ್ಧಿಗಳಾಗಿದ್ದಾರೆ. 
ಟಿ 20 ಲೀಗ್‌ಗೆ ಸಂಪರ್ಕಿಸಿ ಸಹಿ ಹಾಕಿದ ಆಟಗಾರರ ಪಟ್ಟಿ ಕೆಳಕಂಡಂತಿದೆ
ಭಾರತ:
ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಎಲ್ಲರೂ ಸಹಿ ಹಾಕಿದ್ದಾರೆ.
ಆಸ್ಟ್ರೇಲಿಯಾ:
ಆಸ್ಟ್ರೇಲಿಯನ್ ಕ್ರಿಕೆಟ್ ಮಾಜಿ ದಿಗ್ಗಜರಾದ ಗ್ಲೆನ್ ಮೆಕ್ ಗ್ರಾ ಥ್, ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ಆಡಂ ಗಿಲ್ ಕ್ರಿಸ್ಟ್, ಶೇನ್ ವಾರ್ನ್ ಮತ್ತು ಬ್ರೆಟ್ ಲೀ ಎಲ್ಲರೂ ಪಂದ್ಯಾವಳಿಯಲ್ಲಿ ಆಡಲು ಒಪ್ಪಿದ್ದಾರೆ.
 
ಇಂಗ್ಲೆಂಡ್:
ಇಬ್ಬರು ಮಾಜಿ ಇಂಗ್ಲೆಂಡ್ ಕ್ರಿಕೆಟಿಗರಾದ ಆಂಡ್ರ್ಯೂ ಫ್ಲಿಂಟಾಫ್ ಮತ್ತು ಮೈಕೆಲ್ ವಾಘ್ ಸಹಿ ಹಾಕಿದ್ದಾರೆ.
 
ಪಾಕಿಸ್ತಾನ:
ಪಾಕಿಸ್ತಾನದ ಮಾಜಿ ಶ್ರೇಷ್ಠ ಕ್ರಿಕೆಟಿಗರಾದ ವಾಸಿಮ್ ಅಕ್ರಮ್, ಶೋಯಿಬ್ ಅಖ್ತರ್, ಮತ್ತು ವಕಾರ್ ಯುನಿಸ್ ಅವರನ್ನು ಪಂದ್ಯಾವಳಿಗೆ ಸೇರುವಂತೆ ಸಂಪರ್ಕಿಸಲಾಗಿದೆ. ಆದರೆ, ಮೂವರು ಅತ್ಯಂತ ನಿರೀಕ್ಷಿತ ಪಂದ್ಯಾವಳಿಗೆ ಇನ್ನೂ ಸಹಿ ಮಾಡಬೇಕಿದೆ.  ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಇದರಲ್ಲಿ ಆಡಲು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕಾಗುತ್ತದೆ
ವೆಸ್ಟ್ ಇಂಡೀಸ್:
ಲೆಜೆಂಡರಿ ವಿಂಡೀಸ್ ಕ್ರಿಕೆಟ್ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಪಂದ್ಯಾವಳಿಗೆ ಸಹಿ ಮಾಡಿದ್ದಾರೆ. 
ದಕ್ಷಿಣ ಆಫ್ರಿಕಾ:
ಜಾಕ್ ಕಾಲಿಸ್, ಅಲನ್ ಡೊನಾಲ್ಡ್ ಮತ್ತು ಲ್ಯಾನ್ಸ್ ಕ್ಲೂಸ್ನರ್ ದಕ್ಷಿಣ ಆಫ್ರಿಕಾದ ಮೂವರು  T20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ಶ್ರೀಲಂಕಾ:
ಶ್ರೀಲಂಕಾ ಕ್ರಿಕೆಟಿಗ ಮಹೇಲ ಜಯವರ್ಧನೆ ಮತ್ತು ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಪಂದ್ಯಾವಳಿಗೆ ಸಹಿ ಮಾಡಿದ್ದು,
ಕ್ರಿಕೆಟ್ ಎಲ್ಲಾ ಸ್ವರೂಪಗಳಿಗೂ ನಿವೃತ್ತಿಯಾಗಬೇಕಿರುವ ಕುಮಾರ್ ಸಂಗಕ್ಕರಾ ಅವರನ್ನು ಸಂಪರ್ಕಿಸಲಾಗಿದೆ. 

Share this Story:

Follow Webdunia kannada